Advertisement

ಬೀಳದ ಬೇಲ್ಸ್‌ : ಕೊಹ್ಲಿ, ಫಿಂಚ್‌ ಅಸಮಾಧಾನ

12:33 AM Jun 11, 2019 | Sriram |

ಲಂಡನ್‌: ಚೆಂಡು ಬಡಿದಾಗ ಮಿನುಗುವ ಎಲ್‌ಇಡಿ ಬೇಲ್ಸ್‌ಗಳು ನೋಡಲು ಆಕರ್ಷಕವಾಗಿರಬಹುದು, ಟಿವಿ ಅಂಪಾಯರ್‌ಗಳ ಕೆಲಸವನ್ನೂ ಸುಲಭಗೊಳಿಸಿರಬಹುದು. ಆದರೆ ಆಟಗಾರರಿಗೆ ಮಾತ್ರ ಈ ಬೇಲ್ಸ್‌ಗಳು ಇಷ್ಟವಾಗಿಲ್ಲ. ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯದ ನಾಯಕ ಆರನ್‌ ಫಿಂಚ್‌ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಇದಕ್ಕೆ ಕಾರಣ, ಸ್ಟಂಪ್‌ಗೆ ಚೆಂಡು ಬಡಿದರೂ ಈ ಬೇಲ್ಸ್‌ಗಳು ಕೆಳಗುರುಳದಿರುವುದು! ವಿಶ್ವ ಕಪ್‌ ಕೂಟದಲ್ಲಿ ಈಗಾಗಲೇ ಸುಮಾರು 10 ಸಲ ಹೀಗಾಗಿದೆ. ಅಷ್ಟೂ ಸಲ ಬ್ಯಾಟ್ಸ್‌ಮನ್‌ಗಳು ಬಚಾ ವಾಗಿದ್ದಾರೆ. ಬೇಲ್ಸ್‌ಗಳ ಒಳಗೆ ಬಹಳಷ್ಟು ವಯರ್‌ಗಳಿರುವುದರಿಂದ ಅವುಗಳ ಭಾರ ಹೆಚ್ಚಾಗಿದೆ. ಹೀಗಾಗಿ ಅವು ಸ್ಟಂಪ್‌ನಿಂದ ಕೆಳಗುರುಳುತ್ತಿಲ್ಲ. ಬೇಲ್ಸ್‌ ಬಿದ್ದರೆ ಮಾತ್ರ ಆಟಗಾರ ಔಟ್‌ ಎಂಬುದು ಕ್ರಿಕೆಟ್‌ ನಿಯಮ.

ಆಸ್ಟ್ರೇಲಿಯಕ್ಕೆ ಹೆಚ್ಚು ಅನ್ಯಾಯ
ಬೇಲ್ಸ್‌ಗಳಿಂದ ಅತೀ ಹೆಚ್ಚು ಅನ್ಯಾಯವಾಗಿರುವುದು ಆಸ್ಟ್ರೇಲಿಯಕ್ಕೆ. ಕನಿಷ್ಠ 5 ಸಲ ಆಸ್ಟ್ರೇಲಿಯ ಆಟಗಾರರು ಬೇಲ್ಸ್‌ ಉರುಳದೆ ನಿರಾಶೆ ಅನುಭವಿಸಿದ್ದಾರೆ. ಹೀಗಾಗಿ ಫಿಂಚ್‌ ಎಲ್‌ಇಡಿ ಬೇಲ್ಸ್‌ ಮೇಲೆ ಉರಿದು ಬಿದ್ದಿದ್ದಾರೆ. ಕೊಹ್ಲಿ ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಥ ಯಡವಟ್ಟು ಆಗತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

“ಬೇಲ್ಸ್‌ ತಂತ್ರಜ್ಞಾನ ಚೆನ್ನಾಗಿದೆ. ಸ್ಟಂಪ್‌ಗೆ ಚೆಂಡು ಬಡಿದರೆ ಸಂಶಯವೇ ಇಲ್ಲದಂತೆ ತಿಳಿಯುತ್ತದೆ. ಆದರೆ ಸ್ಟಂಪ್‌ ಮೇಲಿಂದ ಬೇಲ್ಸ್‌ ಉರುಳಿಸುವುದು ಮಾತ್ರ ಕಠಿನ ಕೆಲಸ. ನಾನು ಬ್ಯಾಟ್ಸ್‌ಮನ್‌ ಆಗಿಯೂ ಇದನ್ನು ಹೇಳುತ್ತಿದ್ದೇನೆ’ ಎಂದಿದ್ದಾರೆ ಕೊಹ್ಲಿ.

ವೇಗಿಗಳಿಗೂ ಬೇಲ್ಸ್‌ ಉರುಳಿಸಲು ಸಾಧ್ಯ ವಾಗದಿರುವುದು ಆಶ್ಚರ್ಯವುಂಟುಮಾಡಿದೆ ಎಂದು ವಾರ್ನರ್‌ಗೆ ಬುಮ್ರಾ ಬೌಲ್‌ ಮಾಡಿದ ಸಂದರ್ಭವನ್ನು ಉಲ್ಲೇಖೀಸಿ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಮತ್ತು ಧೋನಿ ಬೇಲ್ಸ್‌ ಪರಿಶೀಲಿಸಿದ್ದಾ ರಂತೆ. ಆದರೆ ಈ ಬೇಲ್ಸ್‌ನಲ್ಲಿರುವ ಸಮಸ್ಯೆ ಏನೆಂದು ಅರ್ಥವಾಗುತ್ತಿಲ್ಲ ಎಂದಿದ್ದಾರೆ ಕೊಹ್ಲಿ.

Advertisement

ಹಿಂದೆಂದೂ ಕಂಡಿಲ್ಲ…
ಉತ್ತಮ ಎಸೆತಗಳಿಗೂ ವಿಕೆಟ್‌ ಬೀಳದಿರುವುದು ಕೊಹ್ಲಿಯನ್ನು ಕೆರಳಿಸಿದೆ. ಚೆಂಡು ತಾಗಿದರೂ ಬೇಲ್ಸ್‌ ನಲ್ಲಿರುವ ಲೈಟ್‌ ಮಿನುಗುವುದಿಲ್ಲ ಅಥವಾ ಬೇಲ್ಸ್‌ ಉರುಳುವುದಿಲ್ಲ. ಇಂಥದ್ಧನ್ನು ನಾನು ಈ ಹಿಂದೆ ನೋಡಿಲ್ಲ. ಇದು ಭಾರೀ ಅನ್ಯಾಯ ಎಂದಿರುವ ಕೊಹ್ಲಿ ಮಾತಿಗೆ ಫಿಂಚ್‌ ಸಹಮತ ವ್ಯಕ್ತಪಡಿಸಿದ್ದಾರೆ.

ಸ್ಟಂಪ್‌ಗೆ ಚೆಂಡು ಬಡಿದರೂ ಈ ಬೇಲ್ಸ್‌ ಗಳು ಕೆಳಗುರುಳುವುದಿಲ್ಲ. ವಿಶ್ವಕಪ್‌ ಕೂಟದಲ್ಲಿ ಈಗಾಗಲೇ ಸುಮಾರು 10 ಸಲ ಹೀಗಾಗಿದೆ. ಅಷ್ಟೂ ಸಲ ಬ್ಯಾಟ್ಸ್‌ಮನ್‌ಗಳು ಬಚಾವಾಗಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next