ತೆಕ್ಕಟ್ಟೆ: ಕನ್ನುಕರೆ ಫಾಲ್ಕನ್ ಕ್ಲಬ್ ವತಿಯಿಂದ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋವಿಡ್ 19 ಸೋಂಕಿತರಿಗಾಗಿ ಆಕ್ಸಿಜನ್ ಸಿಲಿಂಡರ್ ಒಳಗೊಂಡಿರುವ ಉಚಿತ ಆ‍್ಯಂಬುಲೆನ್ಸ್ ತುರ್ತು ಸೇವಾ ಕಾರ್ಯಕ್ಕೆ ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಮೇ.10 ರಂದು ಚಾಲನೆ ನೀಡಿದರು.
ಕೋಟೇಶ್ವರ ನಾರಾಯಣ ಹೆಲ್ತ್‌ಕೇರ್‌ನ ವೈದ್ಯಾಧಿಕಾರಿ ಡಾ| ಪ್ರಸಾದ್ ಅವರು ತುರ್ತುಸೇವೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಅಂಶಗಳ ಬಗ್ಗೆ ವಿಶೇಷವಾದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗ, ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ, ಪಾಲ್ಕನ್ ಕ್ಲಬ್ ತೆಕ್ಕಟ್ಟೆ ಕನ್ನುಕರೆ ಇದರ ಅಧ್ಯಕ್ಷ ಮಹಮದ್ ಸಲಾಂ, ತೆಕ್ಕಟ್ಟೆ ಕನ್ನುಕೆರೆ ಮಸೀದಿ ಇದರ ಅಧ್ಯಕ್ಷ ಶಾನ್ವಾಜ್, ಅಬ್ದುಲ್ ಖಾದರ್, ಇರ್ಫಾನ್ ಶೇಖ್, ಮಹಮದ್ ಆಸೀಫ್, ಆದಿಲ್ ಗಫರ್, ಇರ್ಫಾನ್ ಮೊಯ್ದಿನ್, ರಿಯಾಜ್, ನಿಸಾರ್, ಅಲ್ಫಾಜ್, ಶೌದ್ ಮತ್ತಿತರರು ಉಪಸ್ಥಿತರಿದ್ದರು.
ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೋವಿಡ್ ಸೋಂಕಿತರಿಗೆ ತುರ್ತು ಸ್ಪಂದನೆ ಮಾಡುವ ನಿಟ್ಟಿನಿಂದ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸನ್‌ಟ್ರೇಟರ್ ವ್ಯವಸ್ಥೆಯನ್ನು ಒಳಗೊಂಡಂತೆ 24/7 ಆ್ಯಂಬುಲೆನ್ ಉಚಿತ ಸೇವೆ ನೀಡುವ ಮಹತ್ವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಮೊದಲು ಗ್ರಾಮ ಮಟ್ಟದ ಸೇವೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತುರ್ತು ಸೇವೆಗಾಗಿ ಮೊಬೈಲ್ ಸಂಖ್ಯೆ: 8277170424 ಗೆ ಸಂಪರ್ಕಿಸಿ.
– ಮಹಮದ್ ಸಲಾಂ ಕನ್ನುಕೆರೆ ಅಧ್ಯಕ್ಷರು, ಫಾಲ್ಕನ್ ಕ್ಲಬ್ ಕನ್ನುಕರೆ, ತೆಕ್ಕಟ್ಟೆ.
-ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ.