Advertisement

ಫಲಕ್​​ನುಮಾ ಎಕ್ಸ್​ಪ್ರೆಸ್​​​​ ರೈಲಿನಲ್ಲಿ ಬೆಂಕಿ: ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು

06:44 PM Jul 07, 2023 | Team Udayavani |

ತೆಲಂಗಾಣ: ಹೌರಾ-ಸಿಖಂದರಾಬಾದ್ ಮಾರ್ಗವಾಗಿ ಸಂಚರಿಸುತ್ತಿದ್ದ ಫಲಕ್​ನುಮಾ ಎಕ್ಸ್​ಪ್ರೆಸ್​ ರೈಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ರೈಲಿನ ಮೂರು ಬೋಗಿಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

Advertisement

ತೆಲಂಗಾಣದ ಯಾದಾದ್ರಿ ಭುವನಗಿರಿಯಲ್ಲಿ ಈ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಪ್ರಯಾಣಿಕರು ರೈಲಿನಿಂದ ಜಿಗಿದು ಪ್ರಾಣ ಉಳಿಸ್ಕೊಂಡಿದ್ದಾರೆ.

ಶಾರ್ಟ್​ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಿಂದ ರೈಲಿನ ಮೂರು ಬೋಗಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಇದನ್ನೂ ಓದಿ: Budget ಮಂಡನೆ ವೇಳೆ ಭದ್ರತಾ ಲೋಪ; ಶಾಸಕರ ಸೀಟ್ ನಲ್ಲಿ ಅನಾಮಿಕ!!

Advertisement

Udayavani is now on Telegram. Click here to join our channel and stay updated with the latest news.

Next