Advertisement

ಸಾಧು ಹೆಸರಲ್ಲಿ ಫೇಕ್‌ ಟ್ವಿಟ್ಟರ್‌ ಅಕೌಂಟ್‌

09:59 AM Mar 28, 2020 | Suhan S |

ಇಂದು ಯಾವುದೇ ಸೋಶಿಯಲ್‌ ಮೀಡಿಯಾ ಇರಲಿ, ಅಲ್ಲಿ ಬಹುತೇಕ ಸೆಲೆಬ್ರಿಟಿಗಳು ತಮ್ಮ ಅನೇಕ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಈ ಸೋಶಿಯಲ್‌ ಮೀಡಿಯಾಗೆ ಈಗ ಹಾಸ್ಯ ನಟ ಸಾಧುಕೋಕಿಲ ಕೂಡ ಎಂಟ್ರಿಯಾಗಿದ್ದಾರೆ. ಅವರು ಟ್ವಿಟ್ಟರ್‌ಗೆ ಎಂಟ್ರಿಯಾಗುತ್ತಿದ್ದಂತೆಯೇ ಅವರನ್ನು ಸಾವಿರಾರು ಜನರು ಫಾಲೋ ಮಾಡುತ್ತಿದ್ದಾರೆ. ಸಾಧುಕೋಕಿಲ ಅಭಿಮಾಳಿಗಂತೂ ಸಂತಸದಲ್ಲಿದ್ದಾರೆ. ಎಂಬ ಸುದ್ದಿ ಭಾನುವಾರ ಜೋರಾಗಿಯೇ ಹರಡಿದೆ.

Advertisement

ಅಸಲಿಗೆ ವಿಷಯವೇನೆಂದರೆ, ಸಾಧುಕೋಕಿಲ ಅವರು ಟ್ವಿಟ್ಟರ್‌ಗೆ ಎಂಟ್ರಿಕೊಟ್ಟಿಲ್ಲ. ಇದರ ಹಿಂದೆ ಯಾರೋ ಕಿಡಿಗೇಡಿಗಳ ಕೈವಾಡವಿದೆ ಎನ್ನುವುದು ಗೊತ್ತಾಗಿದೆ. ಹೌದು, ಸಾಧುಕೋಕಿಲ ಅವರು ಟ್ವಿಟ್ಟರ್‌ ಲೋಕಕ್ಕೆ ಎಂಟ್ರಿಯಾಗಿಲ್ಲ. ಸಾಧುಕೋಕಿಲ ಹೆಸರಿನಲ್ಲಿ ತೆರೆದಿರುವ ಟ್ವಿಟ್ಟರ್‌ ಖಾತೆ ನಕಲಿ ಎಂಬುದು ತಿಳಿದಿದ್ದು, ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಎಂದು ನಟ ರಘುರಾಮ್‌ ಸ್ಪಷ್ಟಪಡಿಸಿದ್ದು, ಅದೊಂದು ಫೇಕ್‌ ಅಕೌಂಟ್‌ ಎಂದಿದ್ದಾರೆ. ಸಾಧುಕೋಕಿಲ ಟ್ವಿಟ್ಟರ್‌ಗೆ ಎಂಟ್ರಿಯಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ ನಟ ರಘುರಾಮ್‌ ಅವರು, ಸಾಧು ಕೋಕಿಲ ಅವರನ್ನೇ ವಿಚಾರಿಸಿದ್ದಾರೆ. ಆಗ ಅದು ಫೇಕ್‌ ಅಕೌಂಟ್‌ ಎನ್ನುವುದು ಗೊತ್ತಾಗಿದೆ. ಈ ಕುರಿತು ರಘುರಾಮ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಸಾಧುಕೋಕಿಲ ಅವರ ಫೇಕ್‌ ಅಕೌಂಟ್‌ನಿಂದ ಬಂದ ಮೊದಲ ಟ್ವೀಟ್‌ ಏನು ಗೊತ್ತಾ? “ಮೈ ಫ‌ಸ್ಟ್‌ ಟ್ವೀಟ್‌. ಶನಿವಾರದಂದೇ ನಾನು ಇಲ್ಲಿಗೆ ಕಾಲಿಟ್ಟಿದ್ದೇನೆ. ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದ ಮಾಡಲಿ ‘ ಎಂದು ಸಾಧುಕೋಕಿಲ ಅವರ ಫೇಕ್‌ ಅಕೌಂಟ್‌ನಿಂದ ಮಾರ್ಚ್‌ 21 ರಂದು ಸಂದೇಶವಿತ್ತು. ಆ ನಂತರ ಅದು ಫೇಕ್‌ ಎಂದು ಗೊತ್ತಾದಾಗ, ಅಕೌಂಟ್‌ ಡಿಲೀಟ್‌ ಆಗಿದೆ. ಒಂದು ವೇಳೆ ಸಾಧುಕೋಕಿಲ ಅವರ ಟ್ವಿಟ್ಟರ್‌ ಖಾತೆ ಫೇಕ್‌ ಆಗದಿದ್ದರೆ ಅದ ಡಿಲೀಟ್‌ ಆಗುತ್ತಿರಲಿಲ್ಲ. ಆದರೆ ಈಗ ಅದು ಡಿಲೀಟ್‌ ಆಗಿದೆ. ಈ ಹಿಂದೆಯೂ ಸಹ ಅನೇಕ ಸೆಲಿಬ್ರಿಟಿಗಳ ಹೆಸರಲ್ಲಿ ಅಭಿಮಾನಿಗಳು ಸಾಕಷ್ಟು ಫೇಕ್‌ ಅಕೌಂಟ್‌ ಖಾತೆ ತೆರೆದಿರುವುದು ಸಹ ಬೆಳಕಿಗೆ ಬಂದಿದೆ.

ಇನ್ನು ಸಾಧು ಕೋಕಿಲ ಅವರ ಫೇಕ್‌ ಅಕೌಂಟ್‌ನಿಂದ “ಚಡ್ಡಿ ದೋಸ್ತ್ ನೆನಪು… ‘ ನಂತರ ದರ್ಶನ್‌ ಅಭಿನಯದ “ರಾಬರ್ಟ್‌ ‘ ಚಿತ್ರದ “ದೋಸ್ತಾ ಕಣೋ… ‘ ಹಾಡನ್ನು ಹಂಚಿಕೊಳ್ಳಲಾಗಿದೆ. ಮತ್ತೂಂದು ಟ್ವೀಟ್‌ನಲ್ಲಿ ಈ ಹಾಡು ಕೇಳಿದ ಕೂಡಲೇ “ಚಡ್ಡಿ ದೋಸ್ತ್’ ಸಿನಿಮಾ ನೆನಪಾಯಿತು ಎಂಬ ಮಾಹಿತಿ ಹಂಚಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next