Advertisement

“ಚೀನದಿಂದ ಕೋವಿಡ್‌ ಬಗ್ಗೆ ಸುಳ್ಳು ಮಾಹಿತಿ ಪ್ರಚಾರ’

02:27 PM Jun 12, 2020 | mahesh |

ಬ್ರಸೆಲ್ಸ್‌: ಚೀನ ದೇಶ ಕೋವಿಡ್‌ ಬಗ್ಗೆ ಮಾಹಿತಿಗಳನ್ನು ಮುಚ್ಚಿಡುತ್ತಿದೆ ಎಂದು ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ದೂಷಿಸಿದ್ದರು. ಜತೆಗೆ ಹಲವು ದೇಶಗಳೂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲೀಗ ಐರೋಪ್ಯ ಒಕ್ಕೂಟವೇ ಚೀನವನ್ನು ದೂಷಿಸಿದ್ದು, ತಪ್ಪು ಮಾಹಿತಿಗಳದ್ದೇ ಅಲೆಯನ್ನು ತೇಲಿಬಿಟ್ಟಿದೆ ಎಂದು ಹೇಳಿದೆ.

Advertisement

ಇದರೊಂದಿಗೆ ಚೀನವು ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಹರಡಿದ ಸಂದರ್ಭದಲ್ಲಿ ಸುಳ್ಳು ಮಾಹಿತಿಯ ವ್ಯವಸ್ಥಿತ ಪ್ರಚಾರ ಮತ್ತು ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ದೂರಿದೆ. ಐರೋಪ್ಯ ಒಕ್ಕೂಟದ ಈ ಬಹಿರಂಗ ಅಸಮಾಧಾನದ ಬಗ್ಗೆ ದಿ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.  ಎಪ್ರಿಲ್‌ ತಿಂಗಳಲ್ಲಿ ಫ್ರಾನ್ಸ್‌ನ ರಾಜಕಾರಣಿಗಳು ಚೀನದ ವರ್ತನೆ ಬಗ್ಗೆ ಆಕ್ಷೇಪಿಸಿದ್ದು , ಇದಕ್ಕೆ ಚೀನದ ರಾಯಭಾರ ಕಚೇರಿಯೂ ಆಕ್ಷೇಪಾರ್ಹವಾಗಿ ವರ್ತಿಸಿದ್ದನ್ನು ಪತ್ರಿಕೆ ವರದಿ ಮಾಡಿದೆ.

ಅಲ್ಲದೇ ದೊಡ್ಡ ಮಟ್ಟದಲ್ಲಿ ಮಾಹಿತಿಗಳನ್ನು ನೀಡದೆ ಮುಚ್ಚಿಡಲಾಗಿತ್ತು. ಮಾಹಿತಿ ನೀಡದೆ ಬೀಜಿಂಗ್‌ ಕೂಡ ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಮಾಹಿತಿಗಳೇ ತುಂಬಿದ್ದರಿಂದ ನೈಜ ವಿಚಾರ ಜನರು ತಿಳಿಯುವಲ್ಲಿ ಕಷ್ಟವಾಗಿದೆ ಎಂದು ಹೇಳಲಾಗಿದೆ.
3 ವರ್ಷದಲ್ಲೇ ಈ ಬಾರಿ ರಷ್ಯಾದಲ್ಲಿ ಹೆಚ್ಚು ಸಾವು ಹಿಂದಿನ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ರಷ್ಯಾದಲ್ಲಿ ಕಳೆದ ಮೇ ತಿಂಗಳಲ್ಲಿ ಶೇ. 57ರಷ್ಟು ಹೆಚ್ಚು ಸಾವು ಸಂಭವಿಸಿದೆ ಎಂದು ಅಲ್ಲಿನ ರೇಡಿಯೋವೊಂದು ವರದಿ ಮಾಡಿದೆ.

ಈ ನಗರದಲ್ಲಿ ಮೇ ತಿಂಗಳಲ್ಲಿ ಕೋವಿಡ್ ದಿಂದಾಗಿ ಸಾವಿಗೀಡಾದರೆಂದು ಸರಕಾರ ಅಧಿಕೃತವಾಗಿ ಘೋಷಿಸಿದ್ದಕ್ಕಿಂತ ಎರಡು ಪಟ್ಟು ಸಾವು ಸಂಭವಿಸಿರಬಹುದು ಎಂದೂ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next