Advertisement

Fake ಪಾಸ್‌ಪೋರ್ಟ್‌, ನಕಲಿ ದಾಖಲೆ ಪತ್ತೆ: ಮೂವರ ಸೆರೆ

12:40 AM Feb 03, 2024 | Team Udayavani |

ಕಾಸರಗೋಡು: ಬಂದಡ್ಕ ಗ್ರಾಮದ ಕನ್ನಾಡಿತ್ತೋಡಿಯಲ್ಲಿರುವ ಎನ್‌.ಎಚ್‌. ರಸ್ತೆಯಲ್ಲಿ ಬೇಡಗಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಗಂಗಾಧರನ್‌ ಎಂ. ನೇತೃತ್ವದ ಪೊಲೀಸರು ಫೆ. 1ರಂದು ರಾತ್ರಿ ಸುಳ್ಯದಿಂದ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಅದರಲ್ಲಿ ಸಂಶಯಾಸ್ಪದ ರೀತಿಯಲ್ಲಿದ್ದ ಹಲವು ಪಾಸ್‌ಪೋರ್ಟ್‌ಗಳು, ಲ್ಯಾಪ್‌ಟಾಪ್‌ ಮತ್ತು ನಕಲಿ ಮೊಹರುಗಳು, ಹಲವು ನಕಲಿ ದಾಖಲುಪತ್ರಗಳು ಪತ್ತೆಯಾಗಿದ್ದು, ವಶಪಡಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಮೂವರನ್ನು ಬಂಧಿಸಲಾಗಿದ್ದು ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next