Advertisement
ಅಬ್ಟಾಸ್ 2019ರ ನವೆಂಬರ್‌ನಲ್ಲಿ ನಕಲಿ ನೋಟುಗಳನ್ನು (ಕಲರ್ ಜೆರಾಕ್ಸ್) ಮೂಲ್ಕಿ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದಾಗ ಬಂಧಿಸಲ್ಪಟ್ಟಿದ್ದ. ಆತನಿಂದ 100 ರೂ. ಮುಖಬೆಲೆಯ ಒಟ್ಟು 16 ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಅಬ್ಟಾಸ್ 2019ರ ಅ. 24ರಂದು ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿರುವ ಜೆರಾಕ್ಸ್ ಅಂಗಡಿಯೊಂದಕ್ಕೆ ತೆರಳಿ 100 ರೂ. ಮುಖಬೆಲೆಯ 3 ಅಸಲಿ ನೋಟುಗಳನ್ನು ನೀಡಿ ಒಟ್ಟು 20 ಕಲರ್ ಜೆರಾಕ್ಸ್ ಮಾಡಿಸಿಕೊಂಡಿದ್ದ. ಅದೇ ವರ್ಷ ನ. 5ರಂದು ಮೂಲ್ಕಿ ಪೇಟೆಯ ಅಂಗಡಿಯೊಂದಕ್ಕೆ ಒಂದು ನಕಲಿ ನೋಟನ್ನು ನೀಡಿ 1 ಬಾಟಲಿ ನೀರು, ಮತ್ತೂಂದು ಅಂಗಡಿಯಲ್ಲಿ ಇನ್ನೊಂದು ನೋಟು ನೀಡಿ ಬಿಸ್ಕತ್ ಖರೀದಿಸಿದ್ದ. ಇನ್ನೊಂದು ಕಡೆ ಚಹಾ ಮತ್ತು ತಿಂಡಿ ಸೇವಿಸಿದ್ದ. ಅಲ್ಲದೆ ಮತ್ತೂಂದು ನೋಟನ್ನು ನೀಡಿ ಒಬ್ಬರಿಂದ ಚಿಲ್ಲರೆ ಪಡೆದುಕೊಂಡಿದ್ದ. ಹೀಗೆ 4 ನೋಟುಗಳನ್ನು ಬಳಸಿಕೊಂಡಿದ್ದ. ಉಳಿದ ನೋಟುಗಳು ಆತನ ಬಳಿ ಇದ್ದವು. ಈತ ನೀಡಿದ್ದ ನೋಟಿನ ಬಗ್ಗೆ ಕೆಲವರಿಗೆ ಸಂದೇಹ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೂಲ್ಕಿ ಠಾಣಾ ಪಿಎಸ್‌ಐ ಆಗಿದ್ದ ಶೀತಲ್ ಅಲಗೂರು, ಕಾನ್‌ಸ್ಟೆಬಲ್ ಸುರೇಶ್ ಅವರು ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದರು. ಇನ್‌ಸ್ಪೆಕ್ಟರ್ ಜಯರಾಮ ಡಿ. ಗೌಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 489 (ಸಿ)ಯಂತೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಎರಡು ತಿಂಗಳ ಸಜೆ ವಿಧಿಸಿದ್ದಾರೆ. ಅಲ್ಲದೆ 489 (ಸಿ)ಯಂತೆ 2 ವರ್ಷದ ಸಜೆ ಮತ್ತು 2,500 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಒಂದು ತಿಂಗಳ ಸಜೆ ವಿಧಿಸಿ ಆದೇಶ ನೀಡಿದ್ದಾರೆ. ಸರಕಾರದ ಪರ ಅಭಿಯೋಜಕ ನಾರಾಯಣ ಶೇರಿಗಾರ್ ಯು. ಅವರು ವಾದ ಮಂಡಿಸಿದ್ದರು.
Related Articles
ಆರೋಪಿ ಮಂಗಳೂರಿನ ಜೆರಾಕ್ಸ್ ಅಂಗಡಿಗೆ ತೆರಳಿ ನೋಟುಗಳ ಜೆರಾಕ್ಸ್ ಮಾಡಿಕೊಡುವಂತೆ ಅಲ್ಲಿನ ಸಿಬಂದಿಗೆ ಹೇಳಿದ್ದ. ಅದಕ್ಕೆ ಸಿಬಂದಿ ನಿರಾಕರಿಸಿದಾಗ “ಮಕ್ಕಳಿಗೆ ಶಾಲೆಯಲ್ಲಿ ಪ್ರಾಜೆಕ್ಟ್ಗೆ ನೋಟಿನ ಜೆರಾಕ್ಸ್ ಬೇಕು’ ಎಂದಿದ್ದ. ಅದಕ್ಕೂ ಸಿಬಂದಿ ಒಪ್ಪದಿದ್ದಾಗ ಹೆದರಿಸಿ ಒತ್ತಾಯಪೂರ್ವಕವಾಗಿ ಝೆರಾಕ್ಸ್ ಮಾಡಿಸಿಕೊಂಡಿದ್ದ.
Advertisement
ಚಿಲ್ಲರೆ ಪಡೆದು ಅಸಲಿ ಮಾಡಿಕೊಳ್ಳುತ್ತಿದ್ದ ಆರೋಪಿ ಅಬ್ಟಾಸ್ ತನ್ನಲ್ಲಿದ್ದ ನಕಲಿ ನೋಟುಗಳನ್ನು ನೀಡಿ ನೀರಿನ ಬಾಟಲಿ, ಬಿಸ್ಕತ್ ಮೊದಲಾದ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುತ್ತಿದ್ದ. 100 ರೂ. ನಕಲಿ ನೋಟು ನೀಡಿ ಚಿಲ್ಲರೆ ರೂಪದಲ್ಲಿ ಅಸಲಿ ನೋಟುಗಳನ್ನು ಪಡೆದುಕೊಳ್ಳುತ್ತಿದ್ದ. ಮಾತ್ರವಲ್ಲದೆ ಕೆಲವರಿಗೆ ನೂರು ರೂಪಾಯಿಯ ನೋಟು ನೀಡಿ ಚಿಲ್ಲರೆ (ಅಸಲಿ ನೋಟು) ಪಡೆದುಕೊಂಡಿದ್ದ. ಕೆಲವರು ಚಿಲ್ಲರೆ ಕೊಟ್ಟಿದ್ದರೆ, ಇನ್ನು ಕೆಲವರು ಚಿಲ್ಲರೆ ಕೊಡಲು ನಿರಾಕರಿಸಿರುವುದು ತನಿಖೆ ವೇಳೆ ಗೊತ್ತಾಗಿತ್ತು. ಇದನ್ನೂ ಓದಿ: ಸ್ಪೋರ್ಟ್ಸ್ ಡೇ ಎಂದು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ನಾಪತ್ತೆ… ಮೊಬೈಲ್ ಸ್ವಿಚ್ ಆಫ್