Advertisement

ಕೋವಿಡ್-19 ಸೋಂಕಿದ್ದವರು ಅಡವಿಯಲ್ಲಿ ಅಡಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಯುವಕ

09:09 AM Mar 30, 2020 | keerthan |

ವಿಜಯಪುರ: ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಕೋವಿಡ್-19 ಪ್ರಕರಣ ದೃಢಪಡದಿದ್ದರೂ ಜಿಲ್ಲೆಯ ನಾಗಠಾಣ ಗ್ರಾಮದ ಐದು ಜನರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಪ್ರಕರಣ ಇದೆ ಎಂದು ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಸುಳ್ಳು ಸುದ್ದಿ ಹಬ್ಬಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಪ್ರಕಾಶ ಚವ್ಹಾಣ ಎಂಬ ಯುವಕ ತನ್ನ ಫೇಸ್ ಬುಕ್ ನಲ್ಲಿ ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹಜ್ ಯಾತ್ರೆಗೆ ತೆರಳಿದ್ದ 16 ಜನರಲ್ಲಿ 5 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಪೋಸ್ಟ್‌ ಹಾಕಿ ಆತಂಕ ಸೃಷ್ಡಿಸಿದ್ದಾನೆ.

ಕೋವಿಡ್-19 ಸೋಂಕು ಪಾಸಿಟಿವ್ ದೃಢಪಟ್ಟವರು ನಾಗಠಾಣ ಮೂಲದವರು. ಕೋವಿಡ್-19 ರೋಗ ದೃಢಪಟ್ಟರೂ ಚಿಕಿತ್ಸೆ ಪಡೆಯದೇ ಗ್ರಾಮದಿಂದ ತಲೆ ಮರೆಸಿಕೊಂಡಿದ್ದಾರೆ. ಗ್ರಾಮದ ಹೊರ ಭಾಗದ ಅಡವಿಯಲ್ಲಿ ಇರಬಹುದು ಎಂದು ಧೃಢವಾಗಿದೆ ಎಂದು ಪ್ರಕಾಶ ಚವ್ಹಾಣ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾನೆ.

ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಒಂದೂ ಇಲ್ಲ. ಇದರ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹರಡಿದ ಪ್ರಕಾಶ ಚೌವ್ಹಾಣ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ಎಸ್ಪಿ ಅನುಪಮ ಅಗರವಾಲ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next