Advertisement

ಬೆಂಗಳೂರಿನಲ್ಲಿ 12 ಸಾವಿರ ನಕಲಿ ಮಾಸ್ಕ್ ವಶಕ್ಕೆ ಪಡೆದ ಸಿಸಿಬಿ

09:16 AM Apr 01, 2020 | keerthan |

ಬೆಂಗಳೂರು: ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ 12 ಸಾವಿರ ನಕಲಿ ಮಾಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಸೋಮವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ನಕಲಿ ಎನ್ 95 ಮಾಸ್ಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇವು ಸಾಧಾರಣ ಬಟ್ಟೆಯಿಂದ ಮಾಡಿರುವ ಮಾಸ್ಕ್ ಗಳಾಗಿದ್ದು, ಎನ್ 95 ಎಂದು ಸೀಲ್ ಹಾಕಲಾಗಿದೆ.

ಇಷ್ಟಲ್ಲದೆ ಈ ಮಾಸ್ಕ್ ಗಳನ್ನು ನಿಜವಾದ ಎನ್ 95 ಮಾಸ್ಕ್ ಗಳಂತೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next