Advertisement

Sirsi: ನಕಲಿ ಅಂಕಪಟ್ಟಿ ಸೃಷ್ಟಿಸಿ ಗ್ರಾಮೀಣ ಅಂಚೆ ಸೇವಕ ಹುದ್ದೆ: 14 ಮಂದಿ ವಿರುದ್ಧ ದೂರು

09:20 PM Jan 10, 2024 | Team Udayavani |

ಶಿರಸಿ: ನಕಲಿ ಅಂಕಪಟ್ಟಿ ಸೃಷ್ಟಿಸಿ ಮೋಸತನದಿಂದ ಗ್ರಾಮೀಣ ಅಂಚೆ ಸೇವಕ ಹುದ್ದೆಯನ್ನು ಪಡೆದ 14 ಜನರ ವಿರುದ್ಧ ಶಿರಸಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ.

Advertisement

ಅಂಚೆ ನಿರೀಕ್ಷಕ ಮಂಜುನಾಥ ರಾಮಪ್ಪ ದೊಡ್ಮನಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೋಹನ ರುಕ್ಯಾ ನಾಯಕ (24) ಯಾದಗಿರಿ, ಹನುಮಂತ ಭೀಮಪ್ಪಾ ಮದಿಹಳ್ಳಿ (21) ಗೋಕಾಕ, ವಿಠಲ ಬಸಪ್ಪ ಹೊಸೂರ ( 31) ರಾಯಭಾಗ,  ದುಂಡಪ್ಪ ರಾಮಪ್ಪ ಆಶಿರೋಟಿ (23) ಗೋಕಾಕ, ಶರಣ್ ಕುಮಾರ್ ಮೋತಿಲಾಲ್  (26) ಕಲಬುರಗಿ, ಸುರೇಶ ಶಿವಪ್ಪ ಕುಡಗಿ (28) ವಿಜಯಪುರ, ಅಮೃತಾ ಅರವಿಂದಬಾಬು ನಾಯಕ ( 25) ಬಾಗಲಕೋಟ, ಸಚಿನ ಮಾರುತಿ ಭಜಂತ್ರಿ (27) ವಿಜಯಪುರ, ಮಮಿತಾ ಬಾಬು ರಾಥೋಡ್ (29) ವಿಜಯಪುರ, ಸತೀಶ  ಮೋತಿಲಾಲ್ ಪವಾರ (31)ನ ಬಸವನಬಾಗೇವಾಡಿ, ಆಕಾಶ್ ಶ್ರೀನಿವಾಸ ಭಜಂತ್ರಿ (26) ಬಸವನಬಾಗೇವಾಡಿ, ಮೋಹನ್  ನಾಮದೇವ ಚವಾಣ್ (31) ವಿಜಯಪುರ, ದಿಲೀಪ್  ಧನಸಿಂಗ್ ಪವಾರ ( 28) ತಿಕೋಟಾ,  ರವಿ ಮಹಾದೇವಪ್ಪ ದಡ್ಡಿ ( 26) ಬೆಳಗಾವಿ ವಿರುದ್ಧ ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ರತ್ನಾ ಕುರಿ ತನಿಖೆ ಆರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next