ಉಳ್ಳಾಲ: ಸಹಕಾರಿ ಬ್ಯಾಂಕ್ ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ವಂಚನೆ ಮಾಡಿದ ಘಟನೆ ದ.ಕ ಜಿಲ್ಲೆಯಾದ್ಯಂತ ನಡೆದಿದ್ದು ಜಿಲ್ಲೆಯ ಹಲವು ಠಾಣೆಗಳಲ್ಲಿ ಸುಮಾರು 27 ಪ್ರಕರಣಗಳು ಬೆಳಕಿಗೆ ಬಂದಿದ್ದು ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ಮೂಲದ ಸಾದಿಕ್ ಎಂಬಾತನೆ ಪೊಲೀಸರ ವಶದಲ್ಲಿರುವ ಆರೋಪಿಯಾಗಿದ್ದು, ಈತನ ಮೇಲೆ ಉಳ್ಳಾಲ ಪೊಲೀಸ್ ಠಾಣೆ ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಇಂತಹ ಜಾಲ ಸಕ್ರೀಯವಾಗಿದ್ದು ಸುಮಾರು 27 ಪ್ರಕರಣಗಳು ಬಂಟ್ವಾಳ, ನಗರ, ಗ್ರಾಮಾಂತರ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆ, ಮೂಡಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮುಡಿಪುವಿನಲ್ಲಿಬ್ರಾಂಚ್ ಹೊಂದಿರುವ ಪ್ರತಿಷ್ಟಿತ ಸಹಕಾರಿ ಬ್ಯಾಂಜ್ ನಲ್ಲಿ ಅಡವಿಟ್ಟ ಚಿನ್ಬಾಭರಣದ ಕುರಿತು ಸಿಬಂದಿಗಳಿಗೆ ಸಂಶಯ ಉಂಟಾಗಿದ್ದು, ಬ್ಯಾಂಕಿನ ಶಾಖಾಧಿಕಾರಿ ಪೊಲೀಸರನ್ನು ಸಂಪರ್ಕಿಸಿದ್ದರು. ಸ್ಥಳಕ್ಜೆ ಆಗಮಿಸಿದ್ದ ಕೊಣಾಜೆ ಪೊಲೀಸರು ಬಂಗಾರ ಅಡವಿಟ್ಟಿದ್ದ ಸಾದಿಕ್ ನನ್ನು ಬ್ಯಾಂಕ್ ಗೆ ಕರೆಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ನಕಲಿ ಚಿನ್ನ ಅಡವಿಟ್ಡಿರುವುದನ್ನು ಒಪ್ಪಿಕೊಂಡಿದ್ದು ಉಳ್ಳಾಲ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹಲವು ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟಿರುವುದು ದೃಡಪಟ್ಟಿದೆ.
ಇದನ್ನೂ ಓದಿ:ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ
ತನಿಖೆ ಮುಂದುವರೆಯುತ್ತಿದ್ದು ಈಗಾಗಲೇ ಸುಮಾರು 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ನಕಲಿ ಚಿನ್ನದ ಮೂಲ ಕೇರಳ: ನಕಲಿ ಚಿನ್ನದ ಮೂಲ ಕೇರಳವಾಗಿದ್ದು ಈ ಜಾಲದ ಹಿಂದೆ ಓರ್ವ ವ್ಯಕ್ತಿಯಿದ್ದು ಈತನಿಂದಲೇ ಜಿಲ್ಲೆಯಾದ್ಯಂತ ನಕಲಿ ಚಿನ್ನಗಳು ಸರಬರಾಜಗುತ್ತಿದೆ ಎನ್ನಲಾಗಿದೆ.