Advertisement
ಕಂಡು ಕಾಣದಂತೆ: ಮಂಡ್ಯ ಜಿಲ್ಲಾದ್ಯಂತ ಕಳಪೆ ರಸಗೊಬ್ಬರ ಮಾರಾಟ ಎಗ್ಗಿಲ್ಲದೆ ಸಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಮದ್ದೂರು ತಾಲೂಕು ಹೊನ್ನನಾಯಕನಹಳ್ಳಿಯ ರೈತಸೋಮಶೇಖರ್ ಖರೀದಿಸಿರುವ ಗೊಬ್ಬರ ನಕಲಿ ಯಾಗಿರುವುದು ಕಂಡು ಬಂದಿದೆ.
Related Articles
Advertisement
ಸಚಿವರಿಗೂ ಮನವಿ: ನಕಲಿ ಗೊಬ್ಬರ ಮಾರಾಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರಿಗೂ ದೂರು ನೀಡಿದ್ದರು. ನಂತರ ಜಿಲ್ಲಾಧಿಕಾರಿಗೂ ದೂರು ನೀಡಿದ ಪರಿಣಾಮ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಮಾರಾಟಕ್ಕೆ ಬ್ರೇಕ್: ದೂರು ನೀಡಿದ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕಿನ ಸುಜಲೂರು, ಡಿ.ಹಲಸಹಳ್ಳಿ, ದುಗ್ಗನಹಳ್ಳಿ ಹಾಗೂ ನೆಲಮಾಕನಹಳ್ಳಿ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ನಕಲಿ ಗೊಬ್ಬರಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ರೈತ ಸೋಮಶೇಖರ್ ತಿಳಿಸಿದ್ದಾರೆ.
ನಕಲಿ ಗೊಬ್ಬರ ದೃಢ, ಕಂಪನಿಗೆ ನೋಟಿಸ್ : ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವ ಬಗ್ಗೆ ದೂರು ಬಂದಿದ್ದು, ಗೊಬ್ಬರದ ಸ್ಯಾಂಪಲ್‌ಲ್ಯಾಬ್‌ಗ ಕಳುಹಿಸಲಾಗಿತ್ತು. ವರದಿಯಲ್ಲಿ ನಕಲಿಗೊಬ್ಬರ ಎಂದು ತಿಳಿದು ಬಂದಿದೆ. ಅದರಂತೆ ಸುಜಲೂರು ಸಹಕಾರ ಸಂಘದ ಕಾರ್ಯದರ್ಶಿಗೆ ಹಾಗೂ ಅದನ್ನು ಸರಬರಾಜು ಮಾಡಿದ ಮಂಜುನಾಥ ಫರ್ಟಿಲೈಸರ್ ಕಂಪನಿ ವಿರುದ್ಧ ನೋಟಿಸ್ ನೀಡಲಾಗಿದೆ. ನಕಲಿಗೊಬ್ಬರ ತಯಾರಾಗುವ ಕಾರ್ಖಾನೆ ಪತ್ತೆ ಹಚ್ಚಲು ಏಳು ದಿನಗಳ ನಂತರ ಮಂಡ್ಯದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಕರಣದಾಖಲಿಸಲಾಗುವುದು ಎಂದು ಮಂಡ್ಯ ಜಿಲ್ಲೆಜಂಟಿ ಕೃಷಿ ನಿರ್ದೇಶಕರಾದ ಡಾ.ಬಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ಅಕ್ರಮ ದಂಧೆಗೆ ಕಡಿವಾಣ ಯಾವಾಗ? :
ನಕಲಿ ಗೊಬ್ಬರ ಮಾರಾಟ ಮಾಡುವ ಬಗ್ಗೆ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಾರಾಟ ಮಾಡುವುದನ್ನುನಿಷೇಧಿಸಿದರೆ ಸಾಲದು. ಬದಲಾಗಿ ನಕಲಿ ಗೊಬ್ಬರ ತಯಾರಿಸುವ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ನಿಯಂತ್ರಿಸುವ ಮೂಲಕ ರೈತರ ಹಿತದೃಷ್ಟಿ ಕಾಪಾಡಬೇಕಾಗಿದೆ.
ಅಧಿಕಾರಿಗಳು ನಕಲಿ ಗೊಬ್ಬರ ಮಾರಾಟ ಮಾಡುವುದು ಹಾಗೂ ಉತ್ಪಾದನೆಯನ್ನು ತಡೆಗಟ್ಟಲು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಕೃಷಿ ಸಚಿವರುಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ರೈತರಿಗೆ ಆಗುತ್ತಿರುವ ಮೋಸ, ಅನ್ಯಾಯ ವಿವರಿಸಿ ಪ್ರತಿಭಟನೆ ನಡೆಸಲಾಗುವುದು. -ಸೋಮಶೇಖರ್, ಹೊನ್ನನಾಯಕನಹಳ್ಳಿ ರೈತ, ಮದ್ದೂರು
-ಅಣ್ಣೂರು ಸತೀಶ್