ಚಿಕ್ಕಬಳ್ಳಾಪುರ: ಡಿಸಿ ಚಿಕ್ಕಬಳ್ಳಾಪುರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದ ಆನ್‌ಲೈನ್ ಖದೀಮರು, ಪರಿಚಿತರಿಗೆ ಸಂದೇಶ ಕಳುಹಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳವ ಪ್ರಯತ್ನ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನೈಜ ಖಾತೆಯಲ್ಲಿನ ಪೋಟೋಗಳನ್ನು, ಪ್ರೊಫೈಲ್ ಫೋಟೊ ಆಗಿ ಬಳಸಿರುವ ಖದೀಮರು ಮತ್ತೊಂದು ಖಾತೆ ಸೃಷ್ಟಿಸಿದ್ದಾರೆ. ಅವರೊಂದಿಗೆ ಇರುವ ಸ್ನೇಹಿತರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ನಂತರ ಅನುಮಾನ ಬಾರದಂತೆ ಎಫ್‌ಬಿ ಮೆಸೆಂಜರ್ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ವಹಿಸಿದರೆ ಬಿಜೆಪಿಗರು ಒಪ್ಪುವರೇ? ಎಚ್ ಡಿಕೆ
ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಆರ್. ಲತಾ ಅವರು, ಡಿಸಿ ಚಿಕ್ಕಬಳ್ಳಾಪುರ (DC Chikkaballpur) ಎಂಬ ಹೆಸರಿನಿಂದ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆಯಲಾಗಿದ್ದು, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ನಂತರ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಸದರಿ ಹೆಸರಿನಿಂದ ಬರುವ ಫ್ರೆಂಡ್ ರಿಕ್ವೆಸ್ಟ್ ಸ್ವೀಕಾರ ಮಾಡಬಾರದು ಹಾಗೂ ಹಣ ವರ್ಗಾವಣೆ ಮಾಡದಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಂಪ್ರದಾಯಿಕ ಶಿವರಾತ್ರಿ ಮಹಾರಥೋತ್ಸವ