ಬೆಂಗಳೂರು: ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ನಕಲಿ ಖಾತೆ ತೆರೆದಿರುವ ಕಿಡಿಗೇಡಿಗಳು ಅಮಾಯಕ ಮಹಿಳೆಯರನ್ನು ಟಾರ್ಗೆಟ್ ಮಾಡಿ ದುಷ್ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆದರೆ, ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.
ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಖಾತೆ ತೆರೆದಿರುವ ಕಿಡಿಗೇಡಿಗಳು ಅವರ ಫೋಟೋವನ್ನು ಖಾತೆಗೆ ಅಪ್ಲೋಡ್ ಮಾಡಿದ್ದಾರೆ. ಬಳಿಕ “ಲೈಂಗಿಕ ಸಮಸ್ಯೆ ಇದ್ದರೆ ಮೆಸೇಜ್ ಮಾಡಿ’ ಎಂದು ಚಾಟಿಂಗ್ ಮಾಡಿದ್ದಾರೆ. ಅದನ್ನು ಕಂಡ ಕೆಲ ಅಮಾಯಕ ಮಹಿಳೆಯರು, ತಮ್ಮ ವೈಯಕ್ತಿಕ ಸಮಸ್ಯೆ ಹೇಳಿ ಕೊಂಡಿದ್ದಾರೆ. ಅದಕ್ಕೆ ಪ್ರತಿ ಕ್ರಿಯೆ ನೀಡಿ ರುವ ಆರೋಪಿಗಳು, “ನಿಮ್ಮ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ, ಅದನ್ನು ನೋಡಿ ಸಲಹೆ ನೀಡುತ್ತೇವೆ’ ಎಂದಿದ್ದಾರೆ.
ಅದನ್ನು ನಂಬಿದ ಸಾಕಷ್ಟು ಮಂದಿ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದಾರೆ. ಇನ್ನು ಕೆಲವರು ಆಸ್ಪ ತ್ರೆಗೆ ಬರುವುದಾಗಿ ಹೇಳಿ ದರೂ ಬೇಡವೆಂದು ಹೇಳಿ ವಂಚಿಸಿದ್ದಾರೆ. ಅನುಮಾನಗೊಂಡ ಕೆಲ ಮಹಿಳೆ ಯರು, ಡಾ.ಪದ್ಮಿನಿ ಅವರನ್ನು ನೇರವಾಗಿ ಮತ್ತು ಫೋನ್ ಮೂಲಕ ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಡಾ.ಪದ್ಮಿನಿ ಅವರು, ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಜಾಲತಾಣದಲ್ಲಿ ಯಾರನ್ನೂ ಸಂಪರ್ಕಿಸಿಲ್ಲ
“ಇತ್ತೀಚೆಗೆ ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ನನ್ನ ಫೋಟೋ ಬಳಸಿಕೊಂಡು, ಹಲವಾರು ಸ್ತ್ರೀಯರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಯಿತು. ಅದರಿಂದ ತುಂಬ ದುಃಖ ಆಗಿದೆ. ಮೆಸೆಂಜರ್ ಮೂಲಕ ಸ್ತ್ರೀಯರ ವೈಯಕ್ತಿಕ ಸಮಸ್ಯೆ ಕೇಳುವುದು, ಅವರ ಫೋಟೋ ಮತ್ತು ವಿಡಿಯೋ ಗಳನ್ನು ಕಳುಹಿಸಿ ಎಂದು ಕೇಳುವುದು ಮಾಡಿದ್ದಾರೆ. ಈ ಬಗ್ಗೆ ತಿಳಿಯದ ಸ್ತ್ರೀಯರು ನಾನೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದೇನೆ ಎಂದು ಭಾವಿಸಿ ಕೆಲವರು ಕಿಡಿಗೇಡಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಬಗ್ಗೆ ಕೆಲವರು ಅನುಮಾನಗೊಂಡು ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಾನು ಯಾರನ್ನು ಸಂಪರ್ಕಿಸಿಲ್ಲ. ರಾಜಾಜಿನಗರದ ನರ್ಸಿಂಗ್ ಹೋಮ್ ನಲ್ಲಿ ಮಾತ್ರ ಚಿಕಿತ್ಸೆ ನೀಡುತ್ತೇನೆ. ಕೆಲ ಆಸ್ಪತ್ರೆ ಹಾಗೂ ಇತರೆಡೆ ಹಾಕಿರುವ ನನ್ನ ಫೋಟೋ ಬಳಸಿ ಈ ರೀತಿ ಮಾಡಿರಬಹುದು. ದಯವಿಟ್ಟು ಯಾರೂ ಇಂತಹ ಬಲೆಗೆ ಬೀಳ ಬೇಡಿ. ನಿಮ್ಮ ವೈದ್ಯಕೀಯ ಸಮಸ್ಯೆಗೆ ನೇರವಾಗಿ ಸಂಪರ್ಕಿಸಿ. ಅಪರಿಚಿತರ ಕೃತ್ಯದಿಂದ ಸಮಸ್ಯೆಯಾಗಿ ದ್ದರೆ ಕ್ಷಮೆ ಕೇಳುತ್ತೇನೆ. ಗೌಪ್ಯ ವಿಚಾರಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.