Advertisement
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಶ್ರೀರಾಮ್, ಪ್ರಾಪರ್ಟಿಸ್ ಪ್ರೈವೇಟ್ ಲಿಮಿಡೆಟ್ ವೊಂದರಲ್ಲಿ ಫ್ಲ್ಯಾಟ್ ಖರೀದಿಗೆ ಚಿಂತಿಸಿದ್ದರು. ಈ ಮಧ್ಯೆ 2021ರ ಜುಲೈನಲ್ಲಿ ಆ ಕಂಪನಿಯ ಹೆಸರ ಬಳಸಿಕೊಂಡು ಅಶೋಕ್‌ಕುಮಾರ್ ಎಂಬ ನಕಲಿ ಇ-ಮೇಲ್ ವಿಳಾಸದಿಂದ ಫ್ಲ್ಯಾಟ್ ಖರೀದಿ ವಿಚಾರ ಪ್ರಸ್ತಾಪಿಸಿ ಸಂದೇಶ ಕಳುಹಿಸಿದ್ದಾರೆ. ಅಲ್ಲದೆ, ಫ್ಲ್ಯಾಟ್ ಬೇಕಾದಲ್ಲಿ ಈ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ಸೂಚಿಸಿದ್ದಾರೆ.ಅದನ್ನು ನಂಬಿದ ಶ್ರೀರಾಮ್, ಹಂತ-ಹಂತವಾಗಿ 5,31,379 ರೂ. ವರ್ಗಾವಣೆ ಮಾಡಿದ್ದಾರೆ. ಅನಂತರ ಕಂಪನಿ ಸಂಪರ್ಕಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.
Advertisement
ನಕಲಿ ಇ-ಮೇಲ್ ಕಳುಹಿಸಿ 5 ಲಕ್ಷ ರೂ. ವಂಚನೆ
12:19 PM Mar 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.