Advertisement

ವೇತನದಲ್ಲಿ ಮೋಸ: ಇಎಸ್‌ಐಸಿ ಕಾರ್ಮಿಕರ ಆಕ್ರೋಶ

10:32 AM Sep 20, 2018 | Team Udayavani |

ಕಲಬುರಗಿ: ಇಎಸ್‌ಐಸಿ ಆಸ್ಪತ್ರೆಯಲ್ಲಿನ ಹೌಸಿಂಗ್‌, ಕೀಪಿಂಗ್‌ ಕೆಲಸಗಾರರಿಗೆ ವೇತನದಲ್ಲಿ ಮೋಸ ಮಾಡಲಾಗುತ್ತಿದ್ದು,
ಕೂಡಲೇ ಸಂಬಂಧಿ ಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದಲಿತ ಸೇನೆ ನೇತೃತ್ವದಲ್ಲಿ
ಕಾರ್ಮಿಕರು ಇಎಸ್‌ಐಸಿ ಆಸ್ಪತ್ರೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಪ್ರತಿಭಟನೆಕಾರರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಮ್ಯಾನ್‌ ಪವರ್‌ ಏಜೆನ್ಸಿ ಮೂಲಕ ಕೆಲಸ ಮಾಡುತ್ತಿರುವ
ಕಾರ್ಮಿಕರು ಟೆಂಡರ್‌ ಪಡೆದ ಏಜೆನ್ಸಿಗಳ ದಬ್ಟಾಳಿಕೆಗೆ ಒಳಗಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು
ಆರೋಪಿಸಿದರು.

ಮ್ಯಾನ್‌ ಪವರ್‌ ಏಜೆನ್ಸಿ ಗುಲಾಮಗಿರಿಗೆ ಬಗ್ಗದ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ವೇತನದಲ್ಲಿ
ಮೋಸ ಮಾಡಿ ಕಿರುಕುಳ ನೀಡುತ್ತಿವೆ. ಇಂತಹ ಸಂಕಷ್ಟಕ್ಕೆ ಇಎಸ್‌ಐಸಿಯ ನೂರಾರು ಕಾರ್ಮಿಕರು ಈಡಾಗಿದ್ದಾರೆ
ಎಂದರು.

ಇಎಸ್‌ಐಸಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ 192 ಜನ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಏಜೆನ್ಸಿಗಳ ಅಡಿಯಲ್ಲಿ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದಾರೆ. ಮುಂಬೈ ಮೂಲದ ಓರಿಯಂಟಲ್‌ ಪೆಸ್ಸಾಲಿಟಿ ಎಂಬ ಹೆಸರಿನ ಮ್ಯಾನ್‌ ಪವರ್‌ ಏಜೆನ್ಸಿ ಟೆಂಡರ್‌ ಪಡೆದು, ಈ ಹಿಂದೆ
ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಕಾರ್ಮಿಕರನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಬಂದಿದೆ ಎಂದು ವಿವರಿಸಿದರು.

ಪ್ರತಿ ಕಾರ್ಮಿಕರ ವೇತನ ಮಾಸಿಕ 12024 ರೂ. ಆಗಿದ್ದು, ಅದರಲ್ಲಿ ಭವಿಷ್ಯನಿ ಧಿಗಾಗಿ 1441ರೂ., ಇಎಸ್‌
ಐಸಿಗಾಗಿ 12 ರೂ., ಸಮವಸ್ತ್ರಗಳಿಗಾಗಿ 125 ರೂ. ಸೇರಿ ಒಟ್ಟು 1789ರೂ.ಗಳನ್ನು ಕಡಿತಗೊಳಿಸಲಾಗುತ್ತಿದೆ. ಇದು
ಏಜೆನ್ಸಿಯ ಮೋಸವಾಗಿದ್ದು, ಕಳೆದ ಜೂನ್‌ನಲ್ಲಿ ಈ ಅಕ್ರಮ ಬಯಲಾಗಿದೆ ಎಂದು ಆರೋಪಿಸಿದರು.

Advertisement

ಏಜೆನ್ಸಿ ವ್ಯವಸ್ಥಾಪಕ ಛತ್ರಪತಿ ಚವ್ಹಾಣ, ಶಿವಶರಣಪ್ಪ ಮೂಲಗೆ ಅವರನ್ನು ಕೇಳಿದರೆ ಅವರು ಬೇಜವಾಬ್ದಾರಿಯಿಂದ
ಮಾತನಾಡುತ್ತಾರೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಓಡಿಸುವುದಾಗಿ ಬೆದರಿಕೆ ಹಾಕುತ್ತಾರೆ. ವ್ಯವಸ್ಥಾಪಕ
ನಿರ್ದೇಶಕ ನವೀನ್‌ ಅವರು ದುರ್ವರ್ತನೆ ತೋರಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಏಜೆನ್ಸಿ ವಿರುದ್ಧ ಪ್ರಕರಣ
ದಾಖಲಿಸಿ, ವೇತನದಲ್ಲಿ ಆಗುತ್ತಿರುವ ಮೋಸ ತಡೆಯಬೇಕು ಹಾಗೂ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ದಲಿತ ಸೇನೆ ಡಿ.ಕೆ. ಮದನಕರ್‌, ಪಂಚಶೀಲ ಚಾಂಬಾಳ, ಮೂಲಗೆ ಹಾಗೂ ಇತರ ಕಾರ್ಮಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next