Advertisement

OBC ಶರದ್‌ ಪವಾರ್‌ ಹೆಸರಲ್ಲಿ ನಕಲಿ ಸರ್ಟಿಫಿಕೆಟ್‌

11:14 PM Nov 13, 2023 | Team Udayavani |

ಮುಂಬಯಿ : ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಒಬಿಸಿ ಸಮುದಾಯಕ್ಕೆ ಸೇರಿದವರು ಎಂಬಂತೆ ಬಿಂಬಿಸುವ ವೈರಲ್‌ ಆಗಿರುವ ಪ್ರಮಾಣ ಪತ್ರ ನಕಲಿ. ಹೀಗೆಂದು ಪವಾರ್‌ ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಿ ಭಾಷಿಕರಿಗೆ ಮೀಸಲು ನೀಡಬೇಕು ಎಂಬ ಆಗ್ರ ಹದ ನಡುವೆಯೇ ಈ ಬೆಳವಣಿಗೆ ನಡೆದಿದೆ. ಶಾಲಾ ಪ್ರಮಾಣ ಪತ್ರದಲ್ಲಿ ಶರದ್‌ ಒಬಿಸಿಗೆ ಸೇರಿದವರೆಂದು ಬರೆಯಲಾಗಿದೆ. ಪವಾರ್‌ ಅವರು ಓದುತ್ತಿದ್ದ ಕಾಲದಲ್ಲಿ ಇಂಗ್ಲಿಷ್‌ ಮೀಡಿಯಂ ಎಲ್ಲಿತ್ತು. ಪ್ರಮಾಣ ಪತ್ರವನ್ನು ಇಂಗ್ಲಿಷ್‌ನಲ್ಲಿ ನೀಡಲಾಗಿದೆ. ಕಿಡಿಗೇಡಿಗಳು ಇಂಥ ಕೃತ್ಯವೆಸಗಿದ್ದಾರೆ ಎಂದು ದೂರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next