ರಾಮನಗರ: ಮಾಮೂಲಿ ಎಲ್‌ಇಡಿ ಟಿ.ವಿ.ಗಳಿಗೆ ಸೋನಿ ಬ್ರಾವಿಯಾ ಮುಂತಾದ ಪ್ರತಿಷ್ಠಿತ ಬ್ರಾಂಡ್‌ಗಳ ಸ್ಟಿಕರ್ ಮೆತ್ತಿ ಮುಗ್ಧ ಹಳ್ಳಿಗರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಮಾಗಡಿ ತಾಲೂಕು ಕುದೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಮುಜಫ್ಪರ್ ನಗರದ ನಿವಾಸಿಗಳಾದ ಶಹರ್‌ಯಾರ್ ಖಾನ್ ಮತ್ತು ಶಾರುಖ್ ಖಾನ್ ಬಂಧಿತ ಆರೋಪಿಗಳು. ಮತ್ತೂಬ್ಬ ಆರೋಪಿ ನಾಸೀರ್ ಖಾನ್ ಪರಾರಿಯಾಗಿದ್ದಾನೆ. ಪ್ರತಿಷ್ಠಿತ ಟಿ.ವಿ.ಗಳ ಸ್ಟಿಕ್ಕರ್ ಬಳಕೆ: ಪ್ರಸಿದ್ಧ ಬ್ರಾಂಡ್‌ಗಳ ತದ್ರೂಪಿನ ಬಾಕ್ಸ್‌ಗಳು ಹಾಗೂ ಟಿ.ವಿ.ಯ ಮೇಲೆ ಚಂದವಾಗಿ ಎಲ್.ಇ.ಡಿ ಸ್ಮಾರ್ಟ್ ಟಿ.ವಿ. ಎಂದು ನಮೂದಾಗಿರುತ್ತವೆ. ಈ ಟಿ.ವಿ.ಗಳನ್ನು ಆರೇಳು ಸಾವಿರಗಳಿಗೆ ಖರೀದಿಸುವ ಆರೋಪಿಗಳು ಸೋನಿ ಬ್ರಾವಿಯಾ ಮುಂತಾದ ಪ್ರತಿಷ್ಠಿತ ಟಿ.ವಿ.ಗಳಹೆಸರು ಮೆತ್ತಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲೇ ಮಾರಾಟ ಮಾಡುತ್ತಾರೆ.
15 ಟಿ.ವಿ. ಮಾರಾಟ: ಮಾರುಕಟಯಲ್ಲಿ ಈ ಟಿ.ವಿ.ಗಳ ಬೆಲೆ 40 ರಿಂದ50 ಸಾವಿರ ಇದೆ, ಡಿಸ್ಕೌಂಟ್‌ನಲ್ಲಿ ಮಾರಿ ಬಿಡುತ್ತಿದ್ದೇವೆ, ಖರೀದಿ ಬಿಲ್ ಇದೆ ಎಂದು ನಕಲಿ ಬಿಲ್ ಗಳನ್ನು ತೋರಿಸಿ ಪುಸಲಾಯಿಸುತ್ತಾರೆ. ಇವರ ಮಾತುಗಳಿಗೆ ಮರಳಾಗುವ ಗ್ರಾಮಾಂತರ ಮುಗ್ಧರು ಬೆಲೆ ಚೌಕಾಸಿ ಮಾಡುತ್ತಾರೆ. 15 ಸಾವಿರದ ಮೇಲೆ ಎಷ್ಟೇ ಸಿಕ್ಕರೂ ಮಾರಿ ಬಿಡುವ ಚಾಣಕ್ಷರಿವರು. ಹಣ ಕೈಸೇರಿದ ಮರು ಕ್ಷಣದಲ್ಲೇ ಅಲ್ಲಿಂದ ಕಾಲ್ಕಿàಳುವ ಈ ಆರೋಪಿಗಳು ಕುಣಿಗಲ್, ಕುದೂರು ಮುಂತಾದ ಕಡೆ ಸುಮಾರು 15 ಟಿ.ವಿ.ಗಳನ್ನು ಮಾರಾಟ ಮಾಡಿದ್ದಾರೆ.
ಸಿಕ್ಕಿ ಬಿದ್ದಿದ್ದು ಹೇಗೆ? : ನಗರ ಪ್ರದೇಶಗಳ ನಾಗರಿಕರುಪರಿಶೀಲಿಸಿದರೆ ತಮ್ಮ ನಕಲಿ ಬಣ್ಣ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ಆರೋಪಿಗಳು ಮುಗ್ಧ ಗ್ರಾಮಸ್ಥರನ್ನು ಟಾರ್ಗೆಟ್ ಮಾಡುತ್ತಾರೆ. ನ.17ರಂದು ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣಮೂರ್ತಿ ಎಂಬುವರು ಆರೋಪಿಗಳಿಗೆ 8300 ರೂ.ಗೆ ಟಿ.ವಿ. ಖರೀದಿಗೆ ಬೆಲೆ ಕುದುರಿಸುತ್ತಾರೆ. ಟಿ.ವಿ. ಪರಿಶೀಲಿಸಿದಾಗ ಅನುಮಾನ ಬಂದು ಕುದೂರು ಪೊಲೀಸರ ಮೊರೆ ಹೋಗುತ್ತಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಕಲಿ ಟಿ.ವಿ. ರಹಸ್ಯ ಹೊರಬಿದ್ದಿದೆ.
ಕಾರ್ಯಾಚರಣೆ ಹೇಗೆ? : ಉತ್ತರ ಪ್ರದೇಶ ಮೂಲದ ವರಾದ ಈ ಆರೋಪಿಗಳು ದೆಹಲಿಯಿಂದ ಚೆನ್ನೈನ ಚೆನ್ನಿ ಖಾನ್ ಟ್ರೇಡರ್ಗೆ ತರಿಸಿ ಅಲ್ಲಿಂದ ಕೊರಿಯರ್ ಮೂಲಕ ಹೈ-ಫೈ ಹೆಸರಿನ 43 ಇಂಚಿನ ಟಿ.ವಿ.ಗಳನ್ನು ಖರೀದಿಸುತ್ತಾರೆ. ಪ್ರಸಿದ್ಧ ಬ್ರಾಂಡ್‌ಗಳ ಸ್ಟಿಕ್ಕರ್‌ಗಳು ಸಹ ಚೆನ್ನೈನಿಂದಲೇ ಪೂರೈಕೆಯಾಗುತ್ತವೆ. ಸ್ಟಿಕ್ಕರ್ ಗಳನ್ನು ಮೆತ್ತಿ ಮುಗ್ಧ ಗ್ರಾಮಸ್ಥರಿಗೆ ಮಾರಾಟ ಮಾಡುವುದು ಈ ಆರೋಪಿಗಳಕೆಲಸವಾಗಿದೆ.
ದೊಡ್ಡ ಜಾಲವೇ ಇರಬಹುದು; ಎಸ್ಪಿ : ಕುದೂರು ಪೊಲೀಸರು ಪತ್ತೆ ಹಚ್ಚಿದ ನಕಲಿ ಟಿ.ವಿ. ಪ್ರಕರಣದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್ಪಿ ಎಸ್.ಗಿರೀಶ್ ಪ್ರಸಿದ್ಧ ಬ್ರಾಂಡ್ ಗಳ ಹೆಸರಿನಲ್ಲಿ ಮೋಸ ಮಾಡು ತ್ತಿರುವ ಜಾಲ ದೊಡ್ಡದಿರುವ ಶಂಕೆ ಇದೆ. ದೆಹಲಿಗೆ ಜಿಲ್ಲೆಯಿಂದ ಪೊಲೀಸರ ತಂಡ ಹೋಗಿ ಪರಿಶೀಲಿಸಿದೆ. ಕುದೂರು ಪೊಲೀಸರು ಬಂಧಿಸಿರುವ ಆರೋಪಿಗಳಿಂದ 18 ಟಿ.ವಿ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಶ್ಲಾಘನೀಯಕಾರ್ಯ : ಮಾಗಡಿ ಉಪಾಧೀಕ್ಷಕರಾದ ಓಂಪ್ರಕಾಶ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಮಂಜುನಾಥ್.ಬಿ.ಎಸ್, ಕುದೂರು ಠಾಣೆ ಪಿ.ಎಸ್.ಐ ಮಂಜುನಾಥ್.ಎಚ್.ಟಿ, ಸಿಬ್ಬಂದಿ ಯಾದ ಗುರುಮೂರ್ತಿ, ಲಕ್ಷ್ಮೀಕಾಂತ್, ಶಿವಕುಮಾರ್, ಲವಕುಮಾರ್, ಪುರುಷೋತ್ತಮ, ಸುಭಾಷ್ ನಾಗೂರ್‌ತಂಡ ಶ್ಲಾಘನೀಯಕಾರ್ಯ ಮಾಡಿದೆ ಎಂದು ಎಸ್ಪಿ.ಎಸ್.ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.