Advertisement

Threat Call; ಒಂದೇ ದಿನ 50 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ!

11:24 PM Oct 22, 2024 | Team Udayavani |

ಹೊಸದಿಲ್ಲಿ: ಬೆಂಗಳೂರು- ಜೆಡ್ಡಾ ವಿಮಾನ ಸೇರಿದಂತೆ ದೇಶದಲ್ಲಿ ಒಟ್ಟು 50 ವಿಮಾನಗಳಿಗೆ ಮಂಗಳವಾರ ದಿಂದ ಬುಧವಾರದ ಅವಧಿಯಲ್ಲಿ ಹುಸಿಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ಇದರಿಂದಾಗಿ ಸೋಮ ವಾರದ ಬಳಿಕ ಹುಸಿ ಬೆದರಿಕೆ ಕರೆಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. 1 ವಾರದಲ್ಲಿ ಇಂಥ ಪ್ರಕರಣಗಳ ಸಂಖ್ಯೆ 170ಕ್ಕೆ ಏರಿಕೆಯಾಗಿದ್ದು, ಹುಸಿಬಾಂಬ್‌ ಬೆದರಿಕೆಯಿಂದಾಗಿ 9 ದಿನದಲ್ಲಿ ವಿಮಾನಯಾನ ಸಂಸ್ಥೆಗಳಿಗೆ 600 ಕೋಟಿ ರೂ. ನಷ್ಟವಾಗಿದೆ.

Advertisement

ಏರ್‌ ಇಂಡಿಯಾ, ಇಂಡಿಗೋದ ತಲಾ 13 ವಿಮಾನಗಳು, ಆಕಾಸ ಏರ್‌ನ 12, ವಿಸ್ತಾರ ವಿಮಾನಯಾನದ 11 ವಿಮಾನಗಳಿಗೆ ಮಂಗಳವಾರ ಬೆದರಿಕೆ ಕರೆಗಳು ಬಂದಿವೆ.  ಸೋಮವಾರ ರಾತ್ರಿಯೂ ಈ ಮೂರು ಸಂಸ್ಥೆಗಳ ತಲಾ 10 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿದೆ.  ಇಂಡಿಗೋದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ ಬಂದಿದ್ದು, ಬೆಂಗಳೂರು- ಜೆಡ್ಡಾ ವಿಮಾನವನ್ನು ದೋಹಾಗೆ ಮಾರ್ಗ ಬದಲಿಸಲಾಗಿದೆ. ಜತೆಗೆ ಕಲ್ಲಿಕೋಟೆ-ಜೆಡ್ಡಾ, ದಿಲ್ಲಿ-ಜೆಡ್ಡಾ ವಿಮಾನ ಗಳನ್ನೂ ರಿಯಾದ್‌ ಮತ್ತು ಮದೀನಾಗೆ ತೆರಳುವಂತೆ ಸೂಚಿಸಲಾಗಿತ್ತು.

ವಿಸ್ತಾರ ವಿಮಾನಯಾನ ಸಂಸ್ಥೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿದ್ದು, ಸಂಸ್ಥೆಯು ತತ್‌ಕ್ಷಣವೇ ಸೂಕ್ತ ಕ್ರಮಗಳನ್ನು ಅನುಸರಿಸಿ, ಆಡಳಿತಕ್ಕೂ ಈ ಬಗ್ಗೆ ಸೂಚನೆ ನೀಡಿದ್ದಾಗಿ ಹೇಳಿಕೊಂಡಿದೆ. ಈ ಪ್ರಕರಣಗಳಿಂದ ಆಗಿರುವ ನಷ್ಟದ ಬಗ್ಗೆ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next