Advertisement
ಮಂಗಳವಾರ ಕರ್ನಾಟಕ ನೀರಾವರಿ ನಿಗಮದ ಯೋಜನಾ ವಾರು ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎಲ್ಲ ಅಧಿಕಾರಿಗಳ ಆಸ್ತಿ ಪರಭಾರೆ ಆಗದಂತೆ ನಿಯಮಾನುಸಾರ ಋಣಭಾರ ಸೃಷ್ಟಿಸಲು ಜಿಲ್ಲಾಧಿಕಾರಿಗಳನ್ನು ಮತ್ತು ಉಪ ನೋಂದ ಣಾಧಿಕಾರಿಗಳನ್ನು ಕೋರಲಾಗಿದೆ. ಇಂತಹ ಪ್ರಕರಣಗಳನ್ನು ಜಾಗೃತ ದಳದ ತನಿಖೆಗೆ ಒಪ್ಪಿಸಲಾಗಿದೆ. ಬೇರೆ ಯಾವುದಾದರೂ ಪ್ರಕರಣ ಗಳು ಗಮನಕ್ಕೆ ಬಂದರೆ, ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸ ಲಾಗುವುದು ಎಂದೂ ಹೇಳಿದರು.
ರಾಜ್ಯಾದ್ಯಂತ 18 ಸಾವಿರ ಕೋಟಿ ವೆಚ್ಚದ ನೀರಾವರಿ ಕಾಮಗಾರಿಗಳು ಕರ್ನಾಟಕ ನೀರಾವರಿ ನಿಗಮದಡಿ ನಡೆಯುತ್ತಿದ್ದು, ನಿಗಮದ ಒಟ್ಟಾರೆ ನೀರಾವರಿ ಸಾಮರ್ಥ್ಯದ ಗುರಿ 17,14,337 ಹೆಕ್ಟೇರ್ ಆಗಿದೆ. ಈ ಪೈಕಿ 2021ರ ನವೆಂಬರ್ ಅಂತ್ಯಕ್ಕೆ 14,66,251 ಹೆಕ್ಟೇರ್ ಅನ್ನು ನೀರಾವರಿ ವ್ಯಾಪ್ತಿಗೆ ತರಲಾಗಿದ್ದು, ಇನ್ನೂ 2,45,086 ಹೆಕ್ಟೇರ್ ಗುರಿ ಸಾಧಿಸಬೇಕಿದೆ. ಪ್ರಸಕ್ತ ಸಾಲಿನಲ್ಲಿ 45,337 ಹೆಕ್ಟೇರ್ ಜಮೀನನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.