Advertisement

ಬೆಳಗಾವಿ ಎಸ್ ಪಿ ಹೆಸರಲ್ಲಿ ನಕಲಿ ಇನ್ಸ್ಟ್ರಾಗ್ರಾಂ ಖಾತೆ: ಹಣ ಕೇಳುತ್ತಿದ್ದಾರೆ ಖದೀಮರು

11:27 AM Sep 24, 2022 | Team Udayavani |

ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರ ಹೆಸರಿನಲ್ಲಿ ನಕಲಿ ಇನ್ಸ್ಟ್ರಾಗ್ರಾಂ ಖಾತೆ ತೆರೆದು ಹಣ ಕೇಳುತ್ತಿರುವ ಪ್ರಸಂಗ ನಡೆದಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಎಸ್ ಪಿ ಸಂಜೀವ ಪಾಟೀಲ ಮನವಿ ಮಾಡಿದ್ದಾರೆ.

Advertisement

ಎಸ್ ಪಿ ಸಂಜೀವ ಪಾಟೀಲ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸ್ನೇಹಿತರಿಗೆ, ಪರಿಚಯಸ್ಥರಿಗೆ ಹಣ ಕೇಳಲಾಗುತ್ತಿದೆ. ಈವರೆಗೆ ಅನೇಕರಿಗೆ ಹಣ ಕೇಳಿ ಗೂಗಲ್‌ ಪೇ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ ಪಿ ಸಂಜೀವ ಪಾಟೀಲ ಅವರ ಗಮನಕ್ಕೆ ವಿಷಯ ಬಂದಿದ್ದು, ಕೂಡಲೇ ಇದನ್ನು ತಿರಸ್ಕರಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ:ಗಗನಕ್ಕೇರಿದ ಘಟ್ಟದ ಹುಲ್ಲಿನ ಬೆಲೆ; ಹೈನುಗಾರರಿಗೆ ಸಂಕಷ್ಟ, ಕರಾವಳಿಯಲ್ಲಿ ಬೈಹುಲ್ಲು ಕೊರತೆ

‘ನನ್ನ ಹೆಸರು ಮತ್ತು ಫೊಟೊ ಬಳಸಿ ಇನ್ಸ್ಟಾಗ್ರಾಂ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದು ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ ಈ ಬಗ್ಗೆ ಎಚ್ಚರ ವಹಿಸಿ’ ಎಂದು ಎಸ್ ಪಿ ಸಂಜೀವ ಪಾಟೀಲ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next