Advertisement

ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆ: ದೂರು

11:56 AM Nov 22, 2017 | Team Udayavani |

ಬೆಂಗಳೂರು: ಮೈಸೂರು ಮಹಾರಾಣಿ ತ್ರಿಷಿಕಾ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರೆದು ಅನಗತ್ಯ ಹೇಳಿಕೆ ಪ್ರಕಟಿಸಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ತ್ರಿಷಿಕಾರ ಆಪ್ತ ಸಹಾಯಕ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಮೈಸೂರು ರಾಜವಂಶಸ್ಥ ಯದುವೀರ್‌ ಪತ್ನಿ ತ್ರಿಷಿಕಾ ಹೆಸರಿನಲ್ಲಿ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ನಕಲಿ ಖಾತೆ ತೆರಿದ್ದರು. ಅಷ್ಟೇ ಅಲ್ಲದೇ, ಅಪರಿಚಿತ ವ್ಯಕ್ತಿಗೆ ಫ್ರೆಂಡ್‌ ರಿಕ್ವಿಸ್ಟ್‌ ಕಳುಹಿಸುತ್ತಿದ್ದರು. ಜತಗೆ ಅನಗತ್ಯ ಹೇಳಿಕೆಗಳನ್ನು ಪ್ರಕಟಿಸಿ, ಅರಮನೆಯ ಪೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದರು.

ಈ ಕುರಿತು ಯದುವೀರ್‌ 15 ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ, ತ್ರಿಷಿಕಾ ಹೆಸರಿನಲ್ಲಿ ನಕಲಿ ಖಾತೆಗಳನ್ನು ಕ್ರಿಯೆಟ್‌ ಮಾಡಿದ್ದು, ಯಾರು ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಬಾರದು, ಒಪ್ಪಿಕೊಳ್ಳಬಾರದು ಎಂದು ಮನವಿ ಮಾಡಿದ್ದರು. ಸದ್ಯ ತ್ರಿಷಿಕಾ ರಾಜಸ್ಥಾನದಲ್ಲಿ ಚೊಚ್ಚಲ ಹೆರಿಗೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next