Advertisement
ನಾವಿದನನ್ನು ಅರಮನೆಗೆ ಬರ ಹೇಳಿ ರಾಜಸಭೆಯಲ್ಲಿ ಅವನನ್ನು ಸ್ನೇಹಿತನಾಗಿ ಇಂದಿನಿಂದ ಅಂಗೀಕರಿಸಿದ್ದೇನೆ ಎಂದು ಘೋಷಣೆಯೂ ಆಯಿತು. ಇತ್ತ ಜನ್ಯನಿಗೆ ನಾವಿದನ ಅನುಪಸ್ಥಿತಿ ಬೇಸರ ಪಡಿಸುತ್ತಿದ್ದರೂ ಅವನ ಸ್ಥಾನ-ಗೌರವಗಳನ್ನು ಕಂಡು ಖುಷಿಯಾಗುತ್ತಿತ್ತು. ಆದರೆ ನಾವಿದ ರಾಜನೊಂದಿಗೆ ಮಾತನಾಡುವಾಗಲೆಲ್ಲ ಜನ್ಯನ ಕುರಿತು ಪ್ರಸ್ತಾಪ ಸಲ್ಲಿಸುತ್ತಲೇ ಇರುವುದು ಸರಿ ಎಂದು ಕಂಡು ಬಾರದೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದನು. “ಇನ್ನು ಮುಂದೆ ಅವನನ್ನು ನೀನು ಭೇಟಿಯಾಗಬಾರದು. ನಿನ್ನ ಪ್ರಾಣ ಸ್ನೇಹಿತ ನಾನು ಮಹಾರಾಜ, ಆ ಮೂರು ಕಾಸಿನವನ ಸಹವಾಸ ಈಗ ನಿನಗೆ ಬೇಕೆ?’ ಎಂದು ತನ್ನ ಅಭಿಪ್ರಾಯ, ಅಸಮಾಧಾನವನ್ನು ತಿಳಿಸುತ್ತಾನೆ. ಆದರೆ ನಾವಿದನಿಗೆ ಈ ಮನಃಸ್ಥಿತಿ ಕಂಡು ಆಶ್ಚರ್ಯವೂ ಬೇಸರವೂ ಆಯಿತು. ಇನ್ನೂ ತಾಳ್ಮೆ ವಹಿಸಿದರೆ ಜನ್ಯ ನನ್ನ ಬದುಕಿನಿಂದಲೇ ದೂರ ಸರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು, “ನನಗೆ ಬದುಕ ಕಲಿಸಿದ ಜನ್ಯನೇ ಪ್ರಾಣ ಸ್ನೇಹಿತ. ಸಂಪತ್ತಿನಿಂದ ನಂಬಿಕೆನ್ನಾಗಲಿ ಸ್ನೇಹವನ್ನಾಗಲಿ ಸಂಪಾದಿಸಲು ಸಾಧ್ಯವಿಲ್ಲ. ಹಾಗೇ ಸಂಪಾದಿಸಿದರೂ ಅದು ನೀರ ಮೇಲಿನ ಗುಳ್ಳೆಯಂತೆ’ ಎಂದು ಪ್ರತಿಕ್ರಿಯಿಸುತ್ತಾನೆ. ತಪ್ಪನ್ನು ಅರಿತ ರಾಜನೂ ಬೇಸರದಿಂದ ಜನ್ಯ ಮತ್ತು ನಾವಿದರಲ್ಲಿ ಕ್ಷಮೆಯಾಚಿಸಿ ಇಬ್ಬರ ಸ್ನೇಹಕ್ಕೂ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ.
Advertisement
ನಂಬಿಕೆಯೇ ಸ್ನೇಹದ ತಳಪಾಯ
11:57 PM Mar 08, 2020 | Sriram |
Advertisement
Udayavani is now on Telegram. Click here to join our channel and stay updated with the latest news.