ಪ್ರತಿಯೊಬ್ಬ ಜೀವನದಲ್ಲಿ ಪ್ರತಿದಿನ ತುಂಬಾ ವೈಶಿಷ್ಟ್ಯ ರೂಪದಲ್ಲಿ ಕೂಡಿರುತ್ತದೆ. ಅದು ಖುಷಿ ದುಃಖ ನೋವು ನಲಿವು ಪ್ರತಿ ನವರಸಗಳನ್ನು ತುಂಬಿರುತ್ತದೆ. ಮನುಷ್ಯ ಸಮಯಕ್ಕೆ ಸರಿಯಾಗಿ ಅವನ ಆಲೋಚನೆಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.
ಯಾಕೆಂದರೆ ಓದುತ್ತಿರುವ ಭೂಮಿ, ಯಾರಿಗೂ ನಿಲ್ಲುವುದಿಲ್ಲ ಅದು ಯಾವುದೇ ಸಮಸ್ಯೆಯಾಗಿರಲಿ ನೋವುಗಳನ್ನು ಬಿಟ್ಟು ಮುನ್ನಡೆಯಬೇಕು. ಕಳೆದ ಒಂದು ವರ್ಷ ನಿಮಗೆ ತುಂಬಾ ನೋವು ಅಥವಾ ಖುಷಿ ಆಗಿರಬಹುದು ಅಥವಾ ನಿಮ್ಮ ನೆಚ್ಚಿನವರನ್ನು ಕಳೆದುಕೊಂಡಿರಬಹುದು.
ನಿಮ್ಮ ಜೀವನದಲ್ಲಿ ತುಂಬಾ ಕಷ್ಟಗಳನ್ನು ಎದುರಿಸಿ ಬಂದಿರಬಹುದು. ಇಲ್ಲವಾದಲ್ಲಿ 365 ದಿನ ಸಾವಿರ ಕಥೆಗಳನ್ನು ನೋಡುತ್ತಾ ಬಂದಿರಬಹುದು.
ಹೀಗೆ ಸೂರ್ಯ ಮುಳುಗಿ ಮತ್ತೂಂದು ಬಾರಿ ಉದಯಿಸಿ ಬರುತ್ತಾನೋ ಅದೇ ರೀತಿಯಲ್ಲಿ ನಾವು ಕೂಡ ಹೊಸ ಒಂದು ಉತ್ಸಾಹದಿಂದ ನಮ್ಮ ಜೀವನವನ್ನು ನಡೆಸಬೇಕು. ದೇವರು ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುತ್ತಾನೆ. ಆ ಒಂದು ಸಮಯಕ್ಕೆ ನಾವು ಕಾಯಬೇಕು ಜೀವನದಲ್ಲಿ ಆಗಿರುವ ಪ್ರತಿಯೊಂದು ಕಹಿ ಘಟನೆ ಒಂದು ಹೊಸ ರೂಪದಲ್ಲಿ ಬೆಳಕು ನೀಡುತ್ತದೆ. ಆದಷ್ಟು ನೋವನ್ನು ಮರೆಯೋದು ಕಲಿಯೋಣ.
ನಾವು ನೋಡುವ ಜಗತ್ತು ನಮ್ಮ ದೃಷ್ಟಿಕೋನದಲ್ಲಿ ಇರುತ್ತದೆ. ಒಳ್ಳೆಯ ರೀತಿಯಲ್ಲಿ ನೋಡಿದರೆ ಎಲ್ಲ ತುಂಬಾ ಸುಂದರವಾಗಿ ಕಾಣುತ್ತದೆ. ನಾವು ಕೆಟ್ಟ ದೃಷ್ಟಿಯಲ್ಲಿ ನೋಡಿದರೆ ಎಲ್ಲ ತಪ್ಪು ಎಂದು ಕಾಣಿಸುತ್ತದೆ. ನಾವು ಒಳ್ಳೆಯದನ್ನು ಬಯಸಿದರೆ ಎಲ್ಲ ಒಳ್ಳೆಯದೇ ಆಗುತ್ತದೆ ಎನ್ನುವುದಕ್ಕೆ ತುಂಬಾ ಉದಾರಣೆಗಳು ನಿಮ್ಮ ಬಳಿಯೇ ಇರುತ್ತದೆ.
ಆದ್ದರಿಂದ ಒಂದು ಒಳ್ಳೆಯ ಮನಸ್ಸಿನಿಂದ ಹೊಸ ವರ್ಷವನ್ನು ಸ್ವಾಗತಿಸಿ, ಕಳೆದ ವರ್ಷದ ಒಳ್ಳೆಯ ವಿಷಯಗಳನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ, ಬೇಡದೆ ಇರುವ ವಿಷಯವನ್ನು ಸಂಪೂರ್ಣವಾಗಿ ಮರೆತುಬಿಡಿ. ಈ ಒಂದು ಹೊಸ ವರ್ಷ ನೀವು ಅಂದುಕೊಂಡಂತೆ ನಡೆಯುತ್ತದೆ ಎಂದು ನೀವು ನಂಬಿರುವ ದೇವರಲ್ಲಿ ಬೇಡಿಕೊಳ್ಳುತ್ತಾ ಸುಖ ಶಾಂತಿ ನೆಮ್ಮದಿ ಪ್ರತಿಯೊಂದು ಜೀವಿಗಳಿಗೂ ಸಿಗಲಿ ಎನ್ನುತ್ತಾ ಸ್ವತ್ಛ ಮನಸ್ಸಿನಿಂದ ಹೊಸ ದಿನಗಳನ್ನು ಸ್ವಾಗತಿಸೋಣ, ನಮ್ಮ ಕೆಲಸ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗೋಣ…
-ಚಂದ್ರಶೇಖರ್
ಉಜಿರೆ