Advertisement

ನಂಬಿಕೆ, ಆತ್ಮ ವಿಶ್ವಾಸದಿಂದ ಯಾವುದೇ ಕಾರ್ಯ ಸಾಧನೆ ಸಾಧ್ಯ:ಸುನಿತಾ

10:53 PM Jun 26, 2019 | Sriram |

ಶನಿವಾರಸಂತೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೆಬ್ಟಾಲೆ ವಲಯದ ವತಿಯಿಂದ ಗೋಣಿಮರೂರು ಗ್ರಾಮದ ಜ್ಞಾನವಿಕಾಸ ಕೇಂದ್ರದಲ್ಲಿ ಮೂಢನಂಬಿಕೆ ಕುರಿತು ಮಹಿಳಾ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.

Advertisement

ಗೋಣಿಮರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ ಅವರು ವಿಚಾರಗೋಷ್ಠಿಗೆ ಚಾಲನೆ ನೀಡಿದ ಅನಂತರ ಮಾತನಾಡಿ ಪ್ರತಿಯೊಬ್ಬರ ಮೊದಲು ತಾವು ಮಾಡುವಂತಹ ಕೆಲಸ ಕಾರ್ಯಗಳ ಬಗ್ಗೆ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಬೇಕು, ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಮೂಢನಂಬಿಕೆಯನ್ನು ಮೈಗೂಡಿಸಿಕೊಂಡರೆ ಯಾವುದೆ ಕೆಲಸ ಕಾರ್ಯ ಮಾಡಲು ಸಾಧ್ಯವಾಗದು, ಪ್ರತಿಯೊಬ್ಬರಿಗೂ ಆದ್ಯಾತ್ಮಿಕ ಚಿಂತನೆ, ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು ತನ್ನ ಆತ್ಮ ವಿಶ್ವಾಸದೊಂದಿಗೆ ಗುರಿ ಸಾಧನೆ ಮಾಡಬೇಕು ಆದರೆ ಮೂಢ‌ನಂಬಿಕೆಯಂತಹ ಕಂದಾ‌ಚಾರ ದಿಂದ ದೂರ ಇರುವಂತೆ ಸಲಹೆ ನೀಡಿದರು.

ಹೆಬ್ಟಾಲೆ ವಲಯ ಮೇಲ್ವಿಚಾರಕ ಕೆ.ವಿನೋದ್‌ಕುಮಾರ್‌ ಅವರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಹಲವು ಮಹಿಳಾ ಪರ ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಈ ನಿಟ್ಟಿನಲ್ಲಿ ಮಹಿಳೆಯರು ಮಾಹಿತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಾಗೃತಿ ಹೊಂದಬೇಕೆಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರಾಗಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿರುವುದರ ಜತೆಯಲ್ಲಿ ಮಹಿಳೆಯರು ಮೂಢನಂಬಿಕೆಯಂತಹ ಸಾಮಾಜಿಕ ಪಿಡುಗುಗಳಿಂದ ಜಾಗೃತಿಗೊಳಿಸುವ ಉದ್ದೇಶದಿಂದ ಜ್ಞಾನ ವಿಕಾಸ ಕೇಂದ್ರಗಳಲ್ಲಿ ಇಂತಹ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಪದ್ಮಾ, ಗೋಣಿಮರೂರು ಒಕ್ಕೂಟದ ಅಧ್ಯಕ್ಷೆ ಮಣಿ, ಸೇವಾ ಪ್ರತಿನಿಧಿ ಸರೋಜಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next