ಸುರಪುರ: ಶಿಕ್ಷಣ ಇಲಾಖೆ ಮತ್ತು ಶೈಕ್ಷಣಿಕ ಪ್ರಗತಿಗೆ ಅಜೀಮ್ ಪ್ರೇಮಜೀ ಫೌಂಡೇಷನ ಕೊಡುಗೆ ಶ್ಲಾಘನೀಯವಾಗಿದೆ. ಅವರ ತರಬೇತಿಗಳಲ್ಲಿ ಶಿಕ್ಷಕರು ತಪ್ಪದೆ ಪಾಲ್ಗೊಂಡು ಅವರ ಕಲಿಕೆಯ ಚಟುವಟಿಕೆಗಳನ್ನು
ತರಗತಿಗಳಲ್ಲಿ ಬಳಸಿಕೊಂಡಲ್ಲಿ ಮಕ್ಕಳ ಕಲಿಕೆಗೆ ಹೆಚ್ಚಿನ ಉತ್ತೇಜನ ದೊರಕಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಮೂರ ಹೇಳಿದರು.
ತಿಮ್ಮಾಪುರದ ಬೀಚ್ ಮೋಹಲ್ಲಾ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜೀಂ ಪ್ರೇಮಜೀ ಫೌಂಡೇಷನ್ ಸಹಯೋಗದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ಮೇಳವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಜ್ಞಾನವೃದ್ಧಿಗೆ ಅನುಭವತ್ಮಾಕ ಕಲಿಕೆ ತುಂಬಾ ಪ್ರಮುಖವಾಗಿದೆ. ಇದರಿಂದ ಮಕ್ಕಳಲ್ಲಿ ಕಲಿಕಾ ಅಭಿರುಚಿ ಹೆಚ್ಚುತ್ತದೆ. ಮೇಲಾಗಿ ಪರೀಕ್ಷಾ ದೃಷ್ಟಿಯಿಂದಲೂ ತುಂಬಾ ಪ್ರಯೋಜನ ಆಗಲಿದೆ ಎಂದರು ಅಜೀಮ್ ಪ್ರೇಮಜೀ ಫೌಂಡೇಷನನ್ ಸಿಇಒ ದಿಲೀಪ್ ರಾಂಜೇಕರ್ ಮಾತನಾಡಿ, ಈ ಭಾಗದ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ನಮ್ಮ ಸಂಸ್ಥೆ ಶಿಕ್ಷಣ ಇಲಾಖೆಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ. ವಿವಿಧ ಮೇಳಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಜ್ಞಾನ ಸಂಪತ್ತು ವೃದ್ಧಿಸಿದೆ. ಇದಕ್ಕೆ ಶಿಕ್ಷಣ ಇಲಾಖೆ ಸಹಕಾರ ಸ್ಮರಣೀಯವಾಗಿದ್ದು, ಮಕ್ಕಳು ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗಂಪೇಟ ಮತ್ತು ಸುರಪುರ ಕ್ಲಷ್ಟರನ 800 ಮಕ್ಕಳು, ಪಾಲಕರು, ಎಸ್.ಡಿ.ಎಮ್ .ಸಿ ಸದಸ್ಯರು ಮತ್ತು ಎ.ಪಿ.ಎಫ್‌ನ್ ಮುಖ್ಯಸ್ಥ ಉಮಾಶಂಕರ ಪೆರಿಯೋಡಿ, ರುದ್ರೇಶ ಎಸ್. ಸಿ.ಆರ್.ಪಿ. ಯೂನುಸ್ ಕಮತಗಿ, ಶಿಕ್ಷಕರಾದ ಯೂನುಸ ಬೇಪಾರಿ, ಅಬ್ದುಲ್ ಜಬ್ಟಾರ, ಸುಭಾಶ ಇ.ಸಿ.ಓ. ಜಾಕೀರ ಹುಸೇನ, ಅಜೀಮ್ ಫರೀದಿ, ಇಲಿಯಾಸ್ ಪರ್ವೆಜ್ ರಾಘವೇಂದ್ರ ಕುಲ್ಕರ್ಣಿ, ನಿಂಗಪ್ಪ, ಅನ್ವರ ಖಾನ, ಬಂದೇನವಾಜ ಇದ್ದರು.