Advertisement
ಆ. 14ರಂದು ಸಾಂತಾಕ್ರೂಜ್ ಪೂರ್ವ ಬಿಲ್ಲವರ ಭವನದ ಸಮಾಲೋಚನ ಸಭಾಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ಮೋಗವೀರರು, ಬಂಟರು, ಬಿಲ್ಲವರು ಅಕ್ಕ ತಂಗಿಯ ಮಕ್ಕಳಂತೆಯೆ ಬದುಕು ಸಾಗಿಸಿದವರು. ಸಾಮರಸ್ಯದ ಜೀವನ ಇತಿಹಾಸ ನಮ್ಮದು. ಆಳ್ವರು ಸ್ವಂತಿಕೆಯ ಪ್ರತಿಷ್ಠೆವುಳ್ಳವರಾಗಿದ್ದು ರಾಷ್ಟ್ರೀಯ ಮನ್ನಣೆಯ ಶೈಕ್ಷಣಿಕ ಸಂಸ್ಥೆಯನ್ನು ಮುನ್ನಡೆಸುವವರು. ಅವರ ಸಂಸ್ಥೆಯೂ ಒಳ್ಳೆಯ ಸಂಸ್ಥೆಯಾಗಿದ್ದು, ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನಿತ್ತು ಸುಶಿಕ್ಷಿತರನ್ನಾಗಿಸಿ ಜೀವನೋಪಾಯಕ್ಕೆ ಶ್ರಮಿಸಿದ ಸಂಸ್ಥೆ. ಘಟನೆಯನ್ನೆ ಮುಂದಿಟ್ಟು ಸಮಾಜ, ಸಮುದಾಯಗಳಲ್ಲಿ ಶಾಂತಿ ಕದಡುವುದು ಸರಿಯಲ್ಲ. ಎಲ್ಲರೂ ಶಾಂತಿಯನ್ನು ಕಾಪಾಡಿಕೊಂಡು ತನಿಖೆಗೆ ಸಹಕರಿಸಬೇಕು. ಉಭಯ ಸಂಸ್ಥೆಗಳಾದ ನಾವು ಈ ಘಟನೆಯ ಸೂಕ್ತ ತನಿಖೆಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೂ ಲಿಖೀತವಾಗಿಯೇ ಮನವಿ ಮಾಡುತ್ತಿದ್ದೇವೆ. ನಮ್ಮಲ್ಲಿ ಯಾವತ್ತೂ ಬಂಟ್ಸ್ , ಬಿಲ್ಲವಾಸ್ ಎನ್ನುವ ಮನಸ್ತಾಪ ಉಂಟಾಗಿಲ್ಲ. ನಾವು ಪೂಜಿಸುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳೇ ನಮಗೆ ವೇದವಾಕ್ಯ. ಅಂದಮೇಲೆ ನಮ್ಮಲ್ಲಿ ಅಂದೂ ಇಂದೂ ಮುಂದೆಂದೂ ಜಾತೀಯ ಸಂಘರ್ಷ ಉದ್ಭವಿಸದು. ಏನಿದ್ದರೂ ನಾವು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುತ್ತಿದ್ದೇವೆ. ಈ ಪ್ರಕರಣದಲ್ಲೂ ಅಷ್ಟೇ ನಾವು ನ್ಯಾಯಪರವಾಗಿ ದನಿಗೂಡಿಸುತ್ತಿದ್ದೇವೆ. ಇದೀಗಲೇ ಈ ಪ್ರಕರಣದ ತನಿಖೆ ಸಾಗುತ್ತಿದೆ. ಅಲ್ಲಿ ತನಕ ನಾವೇನೂ ಪ್ರತಿಕ್ರಿಯಿಸಲು ಅಸಾಧ್ಯ. ತನಿಖಾ ಫಲಿತಾಂಶದ ಅನಂತರವಷ್ಟೇ ನಾವು ಸಮುದಾಯದ ಸಂಸ್ಥೆಗಳ ಅಭಿಪ್ರಾಯ, ಅಭಿಮತಗಳನ್ನು ಕ್ರೋಡಿಕರಿಸಿ ಮುಂದಿನ ಹೆಜ್ಜೆಗಳನ್ನಿರಿಸಲಿದ್ದೇವೆ. ಸಂಸ್ಥೆಗಳ ಒಟ್ಟು ನಿರ್ಣಯಕ್ಕೆ ಬದ್ಧರಾಗಿ ಕ್ರಮ ಕೈಗೊಳ್ಳಲಿದ್ದೇವೆ. ಕಾವ್ಯಶ್ರೀ ಸಾವಿನ ಬಗ್ಗೆ ತಿಳಿದಿದ್ದರೂ ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಈ ತನಕ ತನ್ನ ನಿಲುವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಆದರೆ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸದಸ್ಯ ಡಾ| ರಾಜಶೇಖರ್ ಆರ್. ಕೋಟ್ಯಾನ್ ಘಟನೆಯ ಬೆನ್ನಲ್ಲೇ ತನ್ನ ನಿಯೋಗದೊಂದಿಗೆ ಕಾವ್ಯಾಳ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಶೀಘ್ರವೇ ಕಾವ್ಯಾಳ ನಿವಾಸಕ್ಕೆ ಭೇಟಿ ನೀಡಿ, ಈ ಬಗ್ಗೆ ಡಾ| ಮೋಹನ್ ಆಳ್ವ ಅವರಲ್ಲೂ ಮಾತುಕತೆ ನಡೆಸಲಿದ್ದೇನೆ. ಅಂದಮೇಲೆ ನಾವು ಸಾಮಾಜಿಕವಾಗಿ ಆತಂಕ ಸೃಷ್ಟಿಸಿ ಮನಸ್ತಾಪಕ್ಕೆ ಅವಕಾಶ ಕೊಡುವುದು ಸರಿಯಲ್ಲ. ತಪ್ಪಿಸ್ಥರಿಗೆ ಶಿಕ್ಷೆಯಾಗಲೇಬೇಕು. ಆ ಹಿನ್ನೆಲೆಯಲ್ಲೇ ನಮ್ಮ ಹೋರಾಟ ಮುನ್ನಡೆಯುವುದು ಎಂದು ನುಡಿದರು.
Related Articles
Advertisement
ಚಿತ್ರ- ವರದಿ : ರೋನ್ಸ್ ಬಂಟ್ವಾಳ್