Advertisement

Hamas ದಾಳಿ ತಡೆಗೆ ವಿಫ‌ಲ: ಇಸ್ರೇಲ್‌ ಸೇನಾ ಗುಪ್ತಚರ ಮುಖ್ಯಸ್ಥ ರಾಜೀನಾಮೆ

01:12 AM Apr 23, 2024 | Team Udayavani |

ಟೆಲ್‌ ಅವೀವ್‌: ಇಸ್ರೇಲ್‌ ಸೇನಾ ಪಡೆಯ ಗುಪ್ತಚರ ವಿಭಾಗದ ಮುಖ್ಯಸ್ಥ ಮೇ|ಜ|ಆಹರಾನ್‌ ಹಲಿವಾಸ್‌ ಸೋಮವಾರ ರಾಜೀನಾಮೆ ನೀಡಿದ್ದಾರೆ. 2023ರ ಅ.7 ರಂದು ಹಮಾಸ್‌ ಉಗ್ರರ ದಾಳಿಯ ಬಗ್ಗೆ ಮುಂಚಿತವೇ ಖಚಿತಪಡಿಸುವಲ್ಲಿ ವಿಫ‌ಲರಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ. ಈ ಮೂಲಕ ಕಳೆದ ವರ್ಷದ ಭೀಕರ ದಾಳಿಗೆ ಸಂಬಂಧಿಸಿ ಇಸ್ರೇಲ್‌ ಸರಕಾರದ ಮಟ್ಟದಲ್ಲಿ ನಡೆದ ಮೊದಲ ತಲೆದಂಡ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next