ನವದೆಹಲಿ: ನಿಮಗೆ ಸಾಲ ಬೇಕೇ? ಉದ್ಯೋಗದ ಆಮಿಷಗಳನ್ನೊಡ್ಡುವ ಅನಗತ್ಯ ಕರೆಗಳನ್ನು ನಿಯಂತ್ರಿಸಲು ವಿಫಲವಾಗಿರುವ ದೂರಸಂಪರ್ಕ ಕಂಪನಿಗಳ ವಿರುದ್ಧ ಕೇಂದ್ರ ದಂಡ ಪ್ರಹಾರ ನಡೆಸಿದೆ. ಗ್ರಾಹಕರ ಹಿತ ಕಾಪಾಡಲು ವಿಫಲವಾದ್ದಕ್ಕೆ ಕಂಪನಿಗಳ ಮೇಲೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) 110 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಹಾಯಕ ಸಚಿವ ದೇವು ಸಿಂಗ್ ಚೌಹಾಣ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಇದರ ಜತೆಗೆ 4 ಲಕ್ಷ ಮೊಬೈಲ್ ಗ್ರಾಹಕರಿಂದ ಸೈಬರ್ ವಂಚರು ಸೆಳೆದುಕೊಂಡಿದ್ದ 1000 ಕೋಟಿ ರೂ. ಮೊತ್ತವನ್ನು ಮರಳಿಸುವಂತೆ ಸರ್ಕಾರ ಕ್ರಮಕೈಗೊಂಡಿದೆ. ನಕಲಿ ದಾಖಲೆಗಳ ಮೂಲಕ ಪಡೆದುಕೊಂಡಿದ್ದ 55 ಲಕ್ಷ ಮೊಬೈಲ್ ಸಂಪರ್ಕ, 9.9 ಲಕ್ಷ ಬ್ಯಾಂಕ್ ಖಾತೆಗಳು ಮತ್ತು ಪಾವತಿ ವ್ಯಾಲೆಟ್‌ಗಳನ್ನೂ ಸ್ತಂಭನಗೊಳಿಸಲಾಗಿದೆ ಎಂದರು.
ಇಷ್ಟು ಮಾತ್ರವಲ್ಲದೆ ಸೈಬರ್ ಅಪರಾಧಗಳಲ್ಲಿ ಮತ್ತು ಆರ್ಥಿಕ ವಂಚನೆಗಳಲ್ಲಿ ತೊಡಗಿಸಿಕೊಂಡ 2.8 ಲಕ್ಷ ಮೊಬೈಲ್ ಸಂಪರ್ಕಗಳನ್ನೂ ಕಡಿತಗೊಳಿಸಲಾಗಿದೆ. 2019ರಿಂದ ಈಚೆಗೆ 20ಕ್ಕೂ ಹೆಚ್ಚು ಟೆಲಿಮಾರ್ಕೆಟಿಂಗ್ ಕಂಪನಿಗಳು, 40000ಕ್ಕೂ ಅಧಿಕ ಮಾಹಿತಿ ಕಳಿಸುವ, ಎಸ್‌ಎಂಎಸ್ ಕಳಿಸುವ 3000ಕ್ಕೂ ಅಧಿಕ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದರು.
9.9 ಲಕ್ಷ- ಮೊಬೈಲ್/ಪಾವತಿ ವ್ಯಾಲೆಟ್ ರದ್ದು
55 ಲಕ್ಷ- ರದ್ದಾಗಿರುವ ಮೊಬೈಲ್ ಸಂಖ್ಯೆ
2.8 ಲಕ್ಷ- ಸೈಬರ್ ಕ್ರೈಮ್‌ನ ಮೊಬೈಲ್‌ಗಳಿಗೆ ತಡೆ