Advertisement

ಕಾರ್ಮಿಕರು, ರೈತರ ಹಿತ ಕಾಯುವಲ್ಲಿ ವಿಫಲ

03:24 PM May 07, 2020 | mahesh |

ಮಾಲೂರು: ಲಾಕ್‌ಡೌನ್‌ ವೇಳೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ರೈತರು, ಕೂಲಿ ಕಾರ್ಮಿಕರು, ಕುಲಕಸಬುಗಳನ್ನು ಆಧರಿಸಿದ ಹಿಂದುಳಿದ ಸಮುದಾಯಗಳ ಹಿತ ಕಾಪಾ
ಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದರು. ತಾಲೂಕಿನ ಕೊಮ್ಮನಹಳ್ಳಿಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು, ಪೌರಕಾರ್ಮಿಕ, ಇತರೆ ಇಲಾಖೆಗಳ ಮಹಿಳಾ ಸಿಬ್ಬಂದಿಗೆ ಶಾಸಕ ನಂಜೇಗೌಡ ಏರ್ಪಡಿಸಿದ್ದ ಮಂಗಳ ದ್ರವ್ಯಗಳೊಂದಿಗೆ ಸೀರೆ, ದಿನಸಿ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ನೂರಾರು ಎಕರೆಯಲ್ಲಿ ಬೆಳೆದ ತೋಟಗಾರಿಕೆ ಬೆಳೆ, ಹೂವಿನ ಬೆಳೆ ಲಾಕ್‌ಡೌನ್‌ನಿಂದ ನಷ್ಟವಾಗಿದ್ದು, ಸರ್ಕಾರ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ಧನ ಘೋಷಣೆ
ಮಾಡಿದೆ. ಆದರೆ, ರೈತರು ತಮ್ಮ ಬೆಳೆಗಳಿಗೆ ಕೀಟನಾಟಕ ಒಂದು ಬಾರಿ ಸಿಂಪಡಿಸಲು ಕನಿಷ್ಠ 25 ಸಾವಿರ ರೂ. ಖರ್ಚು ಮಾಡುತ್ತಾರೆ ಎಂದು ಹೇಳಿದರು.

ಅದೇರೀತಿಯಲ್ಲಿ ಕುಲಕಸಬು ಆಧರಿಸಿ ಜೀವನ ಸಾಗಿಸುತ್ತಿರುವ ಕ್ಷೌರಿಕರು, ಮಡಿವಾಳ ಸಮುದಾಯದವರು ಹಾಗೂ ನೇಕಾರರ ಪ್ರತಿಕುಟುಂಬಕ್ಕೆ ತಲಾ ಐದು ಸಾವಿರ
ರೂ. ಸಹಾಯ ಧನವನ್ನು ನೀಡುವಂತೆ ಸರ್ಕಾರಕ್ಕೆ ಅಗ್ರಹಿಸುವ ಜೊತೆಗೆ ಇತರೆ ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ಕುಟುಂಬಗಳಿಗೂ ಸಹಾಯಧನವನ್ನು ನೀಡವಂತೆ ಸರ್ಕಾರವನ್ನು ಆಗ್ರಹಿಸಿದರು. ಈ ವೇಳೆ ತಾಲೂಕಿನ ವಿವಿಧ ಇಲಾಖೆಗಳ 1000 ಸಾವಿರ ಮಹಿಳೆಯರಿಗೆ ಸೀರೆ, ಆಹಾರ ಸಾಮಗ್ರಿಗಳ ಕಿಟ್‌ ವಿತರಿಸಲಾಯಿತು. ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಜೀವರ್ಗಿ ಶಾಸಕ ಅಜಯ್‌ಸಿಂಗ್‌, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ಭಾಗವಹಿಸಿದ್ದರು.

ತಮ್ಮ ಕ್ಷೇತ್ರದಲ್ಲೂ ಸೋಂಕು: ತಮ್ಮ ಬಾದಾಮಿ ಕ್ಷೇತ್ರದಲ್ಲಿಯೂ ಕೋವಿಡ್ ಸೋಂಕು ಇದೆಯಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಿಡಿಮಿಡಿಗೊಂಡ ವಿರೋಧ ಪಕ್ಷದ
ನಾಯಕ ಸಿದ್ದರಾಮಯ್ಯ, ನನ್ನ ಕ್ಷೇತ್ರವಾದರೆ ಕೋವಿಡ್ ಬರಬಾರದು ಎಂಥಾ ಏನಾದ್ರೂ ಇದೆಯಾ? ನಮ್ಮ ಕ್ಷೇತ್ರದಲ್ಲಿ ಗರ್ಭಿಣಿ ಸೀಮಂತ ಕಾರಣದಿಂದ ತವರಿಗೆ ಬಂದಿದ್ದು,
ಸೋಂಕು ಪತ್ತೆಯಾಗಿದೆ. ಅವರ ಕುಟುಂಬದ ಎಲ್ಲಾ ಸದಸ್ಯರ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದರು.

ಮಾಸ್ತಿ ಪುತ್ಥಳಿಗೆ ಪುಷ್ಟ ನಮನ: ಮಾಲೂರು ತಾಲೂಕಿನ ಹತ್ತಾರುಹಳ್ಳಿಗಳ ಮೂಲಕ ಕೊಮ್ಮನಹಳ್ಳಿ ಬಂದ ಸಿದ್ದರಾಮಯ್ಯಗೆ ರಸ್ತೆಯಲ್ಲಿನ ಅನೇಕ ಗ್ರಾಮಗಳಲ್ಲಿ ಸ್ವಾಗತ
ದೊರೆಯಿತು. ಮಾಸ್ತಿಗೆ ಬಂದ ಸಿದ್ದರಾಮಯ್ಯ ವೆಂಕಟೇಶ ಅಯ್ಯಂಗಾರ್‌ ಪುತ್ಥಳಿಗೆ ಪುಷ್ಪ ಮಾಲೆ ಹಾಕಿ ಗೌರವ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next