ಕಾಪು : ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿ, ಸ್ವಪಕ್ಷೀಯರ ಪಿತೂರಿ ಮತ್ತು ಕಿರುಕುಳದಿಂದ ಅಧಿಕಾರ ವಂಚಿತರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಪುನಃ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವಲ್ಲಿ ಭ್ರಷ್ಟಾಚಾರದ ಮಾನದಂಡವೇ ಮುಖ್ಯ ಕಾರಣವಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದರು.
ಕಾಪು ಬ್ಲಾಕ್ ಕಾಂಗ್ರೆಸ್‌ನ ಆಶ್ರಯದಲ್ಲಿ ನಡೆದ ಇಲ್ಲಿನ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಸರಕಾರದ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಪ್ರಚುರ ಪಡಿಸುವಲ್ಲಿ ನಾವು ವಿಫಲರಾಗಿರುವುದೇ ನಮ್ಮ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಕಾಪು ಪುರಸಭೆಗೆ ಸುಮಾರು 130 ಕೋ. ರೂ. ಅನುದಾನ ತಂದು ಹಲವಾರು ಜನಪರ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ ಕ್ಷೇತ್ರದ ಹಾಲಿ ಶಾಸಕರು ಶಾಸಕರಾಗಿ 14 ತಿಂಗಳಾಯಿತು, ಪುರಸಭೆಗೆ ಎಷ್ಟು ಅನುದಾನ ನೀಡಿದ್ದಾರೆ ಮತ್ತು ಪುರಸಭೆಯ ಅಭಿವೃದ್ಧಿಗೆ ಶಾಸಕರ ಕೊಡುಗೆಯೇನು ಎನ್ನುವುದನ್ನು ಜನರಿಗೆ ತಿಳಿಸಲಿ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್, ಹರೀಶ್ ನಾಯಕ್, ಪಕ್ಷದ ಮುಖಂಡರಾದ ವಿಕ್ರಂ ಕಾಪು, ಮಾಧವ ಆರ್. ಪಾಲನ್, ಮನಹರ್ ಇಬ್ರಾಹಿಂ, ಕೆ.ಎಚ್. ಉಸ್ಮಾನ್, ಅಬ್ದುಲ್ ಹಮೀದ್, ಲವ ಕರ್ಕೆàರ, ಬಾಬು ಬಂಗೇರ, ಪ್ರಭಾವತಿ ಸಾಲ್ಯಾನ್, ಅಶ್ವಿನಿ, ಸಂಧ್ಯಾ ಬಾಲಕೃಷ್ಣ, ಬಾಬಣ್ಣ ನಾಯಕ್, ಶೇಖರ್ ಸಾಲ್ಯಾನ್, ಐತಪ್ಪ ಕೋಟ್ಯಾನ್, ಪ್ರಭಾಕರ್ ಅಮೀನ್, ಮಧ್ವರಾಜ್ ಬಂಗೇರ, ಶಂಕರ್ ಸಾಲ್ಯಾನ್, ಬಾಬು ಬಂಗೇರ, ಸಂಜೀವಿ ಪೆಂಗಾಲ್, ಗುರುರಾಜ್, ಸಂಜೀವ ಅಂಚನ್ ಉಪಸ್ಥಿತರಿದ್ದರು.
ಕಾಪು ಗ್ರಾಮೀಣ ಸಮಿತಿಯ ಅಧ್ಯಕ್ಷ ನಾಗೇಶ್ ಎಸ್. ಸುವರ್ಣಸ್ವಾಗತಿಸಿದರು.
ದೇವರಾಜ್ ಕೋಟ್ಯಾನ್ ವಂದಿಸಿದರು.