Advertisement
ಕಡ್ಡಾಯ ಶಿಕ್ಷಣ ಹಕ್ಕು ತಿದ್ದುಪಡಿ ಕಾಯ್ದೆ 2017ರ ಸಂಬಂಧ ಲೋಕಸಭೆಯಲ್ಲಿ ಮಾತನಾಡಿದ್ದ ಅವರು, ಫೇಲ್ ಮಾಡುವ ಅವಕಾಶದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಶನಿವಾರ ಕೋಲ್ಕತಾದಲ್ಲಿ ಮಾತನಾಡಿದ ಅವರು 5 ಮತ್ತು 8ನೇ ತರಗತಿಯಲ್ಲಿ ಮಕ್ಕಳನ್ನು ಫೇಲ್ ಮಾಡುವ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ. ಸದ್ಯ ಕಡ್ಡಾಯ ಶಿಕ್ಷಣದ ಹಕ್ಕಿನಲ್ಲಿ ಎಂಟನೇ ತರಗತಿವರೆಗೆ ಯಾವುದೇ ಮಕ್ಕಳನ್ನು ಫೇಲ್ ಮಾಡದಂತೆ ನಿಯಮ ರೂಪಿಸಲಾಗಿದೆ. ಇದಕ್ಕೆ 25ಕ್ಕೂ ಹೆಚ್ಚು ರಾಜ್ಯಗಳು ಆಕ್ಷೇಪವೆತ್ತಿರುವ ಹಿನ್ನೆಲೆಯಲ್ಲಿ 5 ಮತ್ತು 8ನೇ ತರಗತಿ ಯಲ್ಲಿ ಫೇಲ್ ಮಾಡಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ. ಮಾರ್ಚ್‌ನಲ್ಲಿ ಫೇಲ್ ಆಗುವ ವಿದ್ಯಾ ರ್ಥಿಗೆ ಮೇನಲ್ಲಿ ಮತ್ತೂಂದು ಪರೀಕ್ಷೆ ನೀಡಲಾಗುತ್ತದೆ ಎಂದೂ ಹೇಳಿದ್ದಾರೆ. ಅಲ್ಲದೆ, ಅಂತಿಮ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರಗಳಿಗೆ ಅಂತಿಮ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ. Advertisement
ಐದು ಮತ್ತು ಎಂಟನೇ ತರಗತಿಯಲ್ಲಿ ಫೇಲ್‌ಗೆ ಅವಕಾಶ
09:25 AM Jul 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.