Advertisement

ಮರೆಯಾಗುತ್ತಿವೆ ದೊಡ್ಡಾಟ-ಸಣ್ಣಾಟ: ರಾಠೊಡ

11:48 AM Apr 21, 2022 | Team Udayavani |

ಚಿಂಚೋಳಿ: ಆಧುನಿಕತೆ ಭರಾಟೆಯಲ್ಲಿ ಬೆಳ್ಳಿಪರದೆ, ಟಿವಿ, ಇಂಟರ್‌ನೆಟ್‌, ಮೊಬೈಲ್‌ಗ‌ಳಿಂದ ಬಯಲಾಟಗಳು (ದೊಡ್ಡಾಟ- ಸಣ್ಣಾಟ) ಮರೆಯಾಗುತ್ತಿವೆ ಎಂದು ಕಾಂಗ್ರೆಸ್‌ ಮುಖಂಡ ಸುಭಾಶ ರಾಠೊಡ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಗಾರಂಪಳ್ಳಿ ಗ್ರಾಮದೇವತೆ ಜಾತ್ರೆ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಮಲಕ್ಷ್ಮಣ ವನವಾಸ ಬಯಲಾಟ ಉದ್ಘಾಟಿಸಿ ಅವರು ಮಾತನಾಡಿದರು.

ರಾಮ-ಲಕ್ಷ್ಮಣ, ಧುರ್ಯೋಧನ- ಭೀಮನ ಕಾಳಗ, ಬಾಲನಾಗಮ್ಮ, ಸತ್ಯ ಹರಿಶ್ಚಂದ್ರ, ಶ್ರವಣಕುಮಾರ, ಕುಂತಿಪುತ್ರ, ಸತ್ಯವಾನ ಸಾವಿತ್ರಿ, ರೇಣುಕಾ ಯಲ್ಲಮದೇವಿಯಂತ ಪೌರಾಣಿಕ ಬಯಲಾಟಗಳು ಅನೇಕ ವರ್ಷಗಳಿಂದ ಹಳ್ಳಿಗಳಲ್ಲಿ ನಡೆಯುತ್ತಲೇ ಬರುತ್ತಿವೆ. ಈ ಆಧುನಿಕ ಯುಗದಲ್ಲೂ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ನ್ಯಾಯವಾದಿ ಶರಣು ಮೋತಕಪಳ್ಳಿ, ಮಹೇಶ ಗುತ್ತೇದಾರ, ಚಂದ್ರಶೇಖರ ಗುತ್ತೇದಾರ, ಮಲ್ಲಿಕಾರ್ಜುನ ಗುಲಗುಂಜಿ ಬಯಲಾಟ ಕುರಿತು ಮಾತನಾಡಿದರು. ಮುಖಂಡರಾದ ಅನಿಲಕುಮಾರ ಜಮಾದಾರ, ಸಂತೋಷ ಗುತ್ತೇದಾರ, ಸುನೀಲ ದೊಡ್ಡಮನಿ, ನಾಗೇಶ ಗುಣಾಜಿ, ಪವನ ಪಾಟೀಲ, ಬಾಬುರಾವ್‌ ಗುತ್ತೇದಾರ, ಶ್ರೀಧರ ವಗ್ಗಿ, ಸಂಜೀವಕುಮಾರ ಕಟ್ಟಿಮನಿ, ಮರೆಪ್ಪ,ಗೋಪಾಲ ಕೊರಡಂಪಳ್ಳಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next