Advertisement
ಈ ಬಾರಿ ಕೊರೊನಾ ಸೋಂಕು ಮತ್ತು ಅದರ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ ಆಮ್ಲಜನಕ ಕೊರತೆ ಉಂಟಾಯಿತು. ಹೀಗಾಗಿ ಕೈಗಾರಿಕೆಗಳಿಗೆ ಬಳಸುತ್ತಿದ್ದ ಆಮ್ಲಜನಕವನ್ನು ಚಿಕಿತ್ಸೆಗೆ ಉಪಯೋಗಿಸಲಾಗುತ್ತಿದೆ. ಈ ಆಮ್ಲಜನಕ ಕಲುಷಿತ ವಾಗಿರುವ ಅಥವಾ ಪೂರೈಕೆ ವೇಳೆ ಕಲುಷಿತಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಸೋಂಕುಪೀಡಿತರಿಗೆ ಫಂಗಸ್ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು ಎಂಬ ಅಭಿಪ್ರಾಯಗಳು ತಜ್ಞರಿಂದ ಕೇಳಿಬಂದಿವೆ.
ಮೊದಲ ಅಲೆಯಲ್ಲಿ ಬೆರಳೆಣಿಕೆಯಷ್ಟು ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದವು. ಮೊದಲ ಅಲೆಗೂ ಎರಡನೇ ಅಲೆಗೂ ಚಿಕಿತ್ಸಾ ಕ್ರಮಗಳಲ್ಲಿ ಉಂಟಾಗಿರುವ ಬದ ಲಾವಣೆ ಕೈಗಾರಿಕೆಗಳ ಆಮ್ಲಜನಕ ಬಳಕೆ. ಹೀಗಾಗಿ ಅದು ಕಾರಣವಾಗಿರಬಹುದು ಎಂಬ ಅನುಮಾನ ಇದೆ. ಆಮ್ಲಜನಕ ಹರಿಸುವ ನಾಳ ಅಶುದ್ಧವಿದ್ದಾಗ ಡಿಸ್ಟಿಲ್ ವಾಟರ್ ಬದಲು ಟ್ಯಾಪ್ ವಾಟರ್ ಬಳಸಿದಾಗ ಹರಡುವ ಸಾಧ್ಯತೆಗಳಿರುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಹಳೆ ಹಾಸಿಗೆ, ಯಂತ್ರೋಪಕರಣಗಳನ್ನು ಬಳಸಿರುತ್ತಾರೆ ಈ ಎಲ್ಲ ಅಂಶಗಳ ಕುರಿತು ತನಿಖೆ ನಡೆಸಬೇಕು ಎಂದು ಖ್ಯಾತ ನೇತ್ರ ತಜ್ಞ ಡಾ| ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.