Advertisement

ಆಯ್ಕೆ ಸಮಿತಿ ಸಭೆಯಲ್ಲಿ ಅನುಷ್ಕಾ ಶರ್ಮ?

09:51 AM Nov 24, 2019 | Team Udayavani |

ಕೋಲ್ಕತಾ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮ ಪದೇಪದೆ ಸುದ್ದಿಯಾಗುತ್ತ ಟೀಕೆಗೆ ವಸ್ತುವಾಗುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ, ಅವರು ಗುರುವಾರದ ಬಿಸಿಸಿಐ ಆಯ್ಕೆ ಸಮಿತಿ ಸಭೆಯ ವೇಳೆ ಹಾಜರಿದ್ದರು ಎಂಬುದು. ಇದಕ್ಕೆ ಸಾಕ್ಷಿಯಾಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

ಈ ಚಿತ್ರದಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಪಕ್ಕದಲ್ಲೇ ಅನುಷ್ಕಾ ಕುಳಿತ್ತಿದ್ದಾರೆ. ಬಿಸಿಸಿಐ ಅಧಿಕಾರಿಗಳು, ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಾಯ್‌ ಶಾ, ನಾಯಕ ವಿರಾಟ್‌ ಕೊಹ್ಲಿ ಕೂಡ ಇದ್ದಾರೆ. ಅನುಷ್ಕಾಗೆ ಬಿಸಿಸಿಐ ಸಭೆಯಲ್ಲಿ ಏನು ಕೆಲಸ ಎಂಬುದು ಎಲ್ಲರ ಪ್ರಶ್ನೆ.



ಆದರೆ ಈ ಚಿತ್ರದ ಗುಟ್ಟು ಬೇರೆಯೇ ಇದೆ. ಇದು ನ. 21ರ ಆಯ್ಕೆ ಸಮಿತಿ ಸಭೆಯಲ್ಲಿ ತೆಗೆದ ಚಿತ್ರ ನಿಜ. ಆದರೆ ಇದರಲ್ಲಿ ಅನುಷ್ಕಾ ಇರಲಿಲ್ಲ. ಆಯ್ಕೆ ಸಮಿತಿಯ ಓರ್ವ ಸದಸ್ಯ ಗಗನ್‌ ಖೋಡಾ ಅಲ್ಲಿ ಹಾಜರಿದ್ದರು. ಫೋಟೋ ಶಾಪ್‌ನಲ್ಲಿ ಗಗನ್‌ ಖೋಡಾ ತಲೆಗೆ ಅನುಷ್ಕಾ ಶರ್ಮ ಅವರ ತಲೆಯನ್ನು ಅಂಟಿಸಿ ಈ ಕಿತಾಪತಿ ಮಾಡಲಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next