Advertisement

ಸುಳ್ಳುಸುದ್ದಿ ತಡೆಗೆ ಫೇಸ್‌ಬುಕ್‌ ನಿಂದ ಹೊಸ ಪ್ರಯೋಗ

09:27 PM May 11, 2021 | Team Udayavani |

ನವದೆಹಲಿ: ಸಾಮಾಜಿಕ ತಾಣಗಳಾದ ಫೇಸ್‌ ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌, ಯೂಟ್ಯೂಬ್‌ಗಳಲ್ಲಿ ನಕಲಿ ಮಾಹಿತಿಗಳ ಹಾವಳಿ ಜಾಸ್ತಿಯಾಗಿದೆ. ಅನಗತ್ಯವಾಗಿ ಸುದ್ದಿ ಹಬ್ಬಿಸುವವರೂ ಇದ್ದಾರೆ. ಇದನ್ನು ತಡೆಯಲು ಟ್ವೀಟರ್‌ ಈಗಾಗಲೇ ಪ್ರಯೋಗವೊಂದನ್ನು ಶುರು ಮಾಡಿದೆ. ಅದೇ ರೀತಿಯ ಪ್ರಯೋಗವೊಂದಕ್ಕೆ ಫೇಸ್‌ಬುಕ್‌ ಮುಂದಾಗಿದೆ.

Advertisement

ಇನ್ನು ಮುಂದೆ ಯಾವುದೇ ಸುದ್ದಿಯ ಕೊಂಡಿಯನ್ನು ನೀವು ಹಂಚಿಕೊಳ್ಳುವುದಕ್ಕೆ ಮುನ್ನ ಒಮ್ಮೆ ಓದುವಂತೆ ಫೇಸ್‌ಬುಕ್‌ ಮಾಡುತ್ತದೆ. ಅರ್ಥಾತ್‌ ಓದಿ ಕಳುಹಿಸಿ, ಇಲ್ಲವಾದರೆ ತಪ್ಪು ಮಾಹಿತಿ ರವಾನೆಗೆ ಕಾರಣವಾಗಬಹುದೆಂಬ ಒಂದು ಎಚ್ಚರಿಕೆಯ ಸಂದೇಶ ಕಾಣಿಸಿಕೊಳ್ಳುತ್ತದೆ.

ಆಗ ನೀವು ಎಚ್ಚರಗೊಳ್ಳುತ್ತೀರಿ, ಓದುತ್ತೀರಿ. ಇಷ್ಟಾದ ಮೇಲೂ ಓದದೇ ಹಂಚಿಕೊಳ್ಳಲೂ ಅವಕಾಶವಿದೆ! ಸದ್ಯ ಆ್ಯಂಡ್ರಾಯ್ಡ ಓಎಸ್‌ನ ಶೇ.6ರಷ್ಟು ಬಳಕೆದಾರರ ನಡುವೆ ಫೇಸ್‌ಬುಕ್‌ ಇದನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ.

ಇದನ್ನೂ ಓದಿ :ಮನೆಯಲ್ಲೇ ಮದುವೆಗೆ ಅವಕಾಶ ಹಿನ್ನೆಲೆ : ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಳ ಆತಂಕ

Advertisement

Udayavani is now on Telegram. Click here to join our channel and stay updated with the latest news.

Next