Advertisement
ಕಳೆದ 1989ರಲ್ಲಿ ಅನುದಾನ ರಹಿತ ಬಂಕಾಪುರ ಕೀರ್ತಿ ಪ್ರೌಢಶಾಲೆಯಲ್ಲಿ ಕನ್ನಡ ವಿಷಯ ಬೋಧನೆ ಶಿಕ್ಷಕಿಯಾಗಿ ನೇಮಕಾತಿ ಹೊಂದಿದ್ದು, ಸತತ 17 ವರ್ಷ ಅಂದರೆ 2006ವರೆಗೆ ಉಚಿತ ಸೇವೆ ಸಲ್ಲಿಸಿದ್ದೇನೆ. ನಂತರ 12 ವರ್ಷ 7 ತಿಂಗಳು ಸರ್ಕಾರದ ವೇತನ ಪಡೆದು ಸೇವೆ ಸಲ್ಲಿಸಿದ್ದೇನೆ.
ಕುಟುಂಬದಲ್ಲಿ ನನಗೆ ಪತಿ ಬಿಟ್ಟು ಬೇರೆ ಯಾರೂ ಇಲ್ಲ. ಕೂಲಿ ನಾಲಿ ಮಾಡಿ ಬದುಕಬೇಕೆಂದರೆ ಶಕ್ತಿ ಇಲ್ಲ. ವಾಸ ಮಾಡಲು ಸರಿಯಾಗಿ ಮನೆಯಿಲ್ಲ. ಹೀಗಾಗಿ ಬಾಡಿಗೆ ಮನೆಯಲ್ಲೇ ಜೀವನ ಕಳೆಯುತ್ತಿದ್ದೇವೆ. ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ತೃಪ್ತಿಯೊಂದನ್ನು ಬಿಟ್ಟರೆ ಬೇರಾವ ಸೌಕರ್ಯಗಳು ನನಗೆ ಸಿಕ್ಕಿಲ್ಲ. ಆದರೆ ಈ ಸಂಧ್ಯಾ ವಯಸ್ಸಿನಲ್ಲಿ ಪಿಂಚಣಿಗಾಗಿ ಹೋರಾಟ ಮಾಡುವುದು ಅನಿವಾರ್ಯ. ಬದುಕು ಬೀದಿ ಪಾಲಾಗುವ ಮುನ್ನ ಸರ್ಕಾರ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ. ಇಲ್ಲವಾದಲ್ಲಿ ನನ್ನ ಕುಟುಂಬ ಪರಿವಾರಕ್ಕೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ಪತ್ರಿಕೆಗೆ ತಿಳಿಸಿದರು.