Advertisement

ಸ್ಪಿನ್‌ ಎದುರಿಸುವುದೇ ಕಠಿನ ಸವಾಲು: ಉಸ್ಮಾನ್‌ ಖ್ವಾಜಾ

12:05 AM Feb 07, 2023 | Team Udayavani |

ಬೆಂಗಳೂರು: ನಾಗ್ಪುರದಲ್ಲಿ ಫೆ. 9ರಿಂದ ಆರಂಭವಾಗುವ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆರ್‌. ಅಶ್ವಿ‌ನ್‌ ನೇತೃತ್ವದ ಭಾರತೀಯ ಸ್ಪಿನ್‌ ದಾಳಿಯನ್ನು ಎದುರಿಸುವುದು ಅತ್ಯಂತ ಕಠಿನ ಸವಾಲು ಎಂದು ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಉಸ್ಮಾನ್‌ ಖ್ವಾಜಾ ಅವರು ಹೇಳಿದ್ದಾರೆ.

Advertisement

ವೀಸಾ ವಿಳಂಬದಿಂದಾಗಿ ತಡವಾಗಿ ಭಾರತಕ್ಕೆ ಆಗಮಿ ಸಿದ್ದ ಪಾಕಿ ಸ್ಥಾನ ಮೂಲದ ಬ್ಯಾಟ್ಸ್‌ಮನ್‌ ಖ್ವಾಜಾ ಮೊದಲ ಟೆಸ್ಟ್‌ನಲ್ಲಿ ಡೇವಿಡ್‌ ವಾರ್ನರ್‌ ಜತೆ ಇನ್ನಿಂಗ್ಸ್‌ ಆರಂಭಿಸ ಲಿದ್ದಾರೆ. ಭಾರತೀಯ ನೆಲದಲ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಇದೀಗ ಟೆಸ್ಟ್‌ ಮಾದರಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅವರು 2013 ಮತ್ತು2017ರ ಟೆಸ್ಟ್‌ ತಂಡದ ಭಾಗವಾಗಿದ್ದರು. ಕಳೆದ ಎರಡು ವರ್ಷ ಖ್ವಾಜಾ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯದ ‘ವರ್ಷದ ಶ್ರೇಷ್ಠ ಟೆಸ್ಟ್‌ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಖ್ವಾಜಾ ಅವರು 2004-05ರ ಬಳಿಕ ಭಾರತದಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ತಂಡದ ಪ್ರಯತ್ನದಲ್ಲಿ ಮಹತ್ತರ ಪಾತ್ರ ವಹಿಸುವ ಸಾಧ್ಯತೆಯಿದೆ. ಇಲ್ಲಿ “ಖಂಡಿತವಾಗಿಯೂ ವಿಭಿನ್ನ ಭಾವನೆ ಇದೆ. ಈ ಆಟದಲ್ಲಿ ಯಾವುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ನಮ್ಮ ನಿರ್ವಹಣೆ ಸುಧಾರಿಸಿದೆ ಎಂದವರು ತಿಳಿಸಿದರು.

ಅಭ್ಯಾಸ ಪಂದ್ಯವಿಲ್ಲ
ಟೆಸ್ಟ್‌ ಸರಣಿ ಆರಂಭಕ್ಕಿಂತ ಮೊದಲು ಆಸ್ಟ್ರೇಲಿಯ ಅಭ್ಯಾಸ ಪಂದ್ಯವೊಂದರಲ್ಲಿ ಆಡುವುದರಿಂದ ಹಿಂದೆ ಸರಿಯಿತು. ಅದರ ಬದಲಿಗೆ ಇಲ್ಲಿನ ಸ್ಪಿನ್‌ ಸ್ಥಿತಿಯನ್ನು ಅರಿತುಕೊಳ್ಳಲು ಹೆಚ್ಚಿನ ಗಮನ ಹರಿಸಿತು. ಈ ಮಹತ್ವದ ಸೆಣಸಾಟದಲ್ಲಿ ನಮಗೆ ಅಶ್ವಿ‌ನ್‌ ಪಡೆಯ ಸ್ಪಿನ್‌ ದಾಳಿಯನ್ನು ಎದುರಿಸುವುದೇ ಅತ್ಯಂತ ಕಠಿನ ಸವಾಲು ಆಗಿದೆ.

ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಾವು ಸತತ ಅಭ್ಯಾಸ ನಡೆಸುತ್ತಿದ್ದೇವೆ. ಸ್ಪಿನ್‌ ದಾಳಿ ಯನ್ನು ಎದುರಿಸಲು ಯಶಸ್ವಿಯಾದರೆ ನಾವು ಮೇಲುಗೈ ಸಾಧಿಸಬಹುದು ಎಂದು ಖ್ವಾಜಾ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next