Advertisement

ಬಿಜೆಪಿ ಮೋರ್ಚಾಗಳಿಂದ ಜನರಿಗೆ ಸೌಲಭ್ಯ

01:18 PM Sep 26, 2021 | Team Udayavani |

ದೇವನಹಳ್ಳಿ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಬೇಕು. ದೇಶದ ಸಂಸ್ಕೃತಿ, ಸಂಸ್ಕಾರವನ್ನುಉಳಿಸುವಂತಹ ಕಾರ್ಯವಾಗಬೇಕಾಗಿದೆ ಎಂದುಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

Advertisement

ಪಟ್ಟಣದ ಪಾರಿವಾಳ ಗುಟ್ಟದಲ್ಲಿ ಆಯೋಜಿಸಿದ್ದ ಬಿಜೆಪಿ ರಾಜ್ಯ ದಕ್ಷಿಣ ಭಾಗದ ಅಸಂಘಟಿತಕಾರ್ಮಿಕರ ಪ್ರಕೋಷ್ಟದ ಪ್ರಶಿಕ್ಷಣ ಶಿಬಿರವನ್ನುಉದ್ಘಾಟಿಸಿ ಅವರು ಮಾತನಾಡಿದರು.

24 ಪ್ರಕೋಷ್ಟಗಳು, 50 ಸಾವಿರ ಜನರನ್ನು ಮುಟ್ಟಲಿದ್ದೇವೆ. ಒಳ್ಳೆಯ ಆಡಳಿತ ನೀಡಿದ್ದೇವೆ.ವಿವಿಧ ಮೋರ್ಚಾಗಳಿಂದ ಮತ್ತಷ್ಟು ಜನರಿಗೆಮುಟ್ಟಲಿದ್ದೇವೆ. ಮುಂದೆ ಬಿಜೆಪಿ ಮಾತ್ರ ದೇಶದಲ್ಲಿ ಇರಲಿದೆ. ರಾಷ್ಟ್ರದ ಸಂಸ್ಕೃತಿ ನಶಿಸಿಹೋದರೆ ರಾಷ್ಟ್ರಇರುವುದಿಲ್ಲ. ಇದು ದೀನ್‌ ದಯಾಳ್‌ ಉಪಾ ಧ್ಯಾಯರ ಧ್ಯೇಯವಾಗಿದೆ ಎಂದು ಹೇಳಿದರು.ಭವ್ಯಭಾರತದ ಪರಿಕಲ್ಪನೆಯನ್ನು ಇಟ್ಟುಕೊಂಡಿ ರುವ ಆರ್‌ಎಸ್‌ಎಸ್‌ ಸಂಘಟನೆಯು ವೈಚಾರಿಕ ಸಿದ್ಧಾಂತಗಳನ್ನು ಉಳಿಸಿಕೊಳ್ಳಲು ಹೊರಟಿದೆ.

ಬಿಜೆಪಿ ಅಧಿಕಾರಕ್ಕೆ ಜೋತು ಬಿದ್ದಿಲ್ಲ. ಸ್ವಾತಂತ್ರ್ಯಕ್ಕಾಗಿ ಹಿರಿಯರು ಬಲಿಯಾಗಿದ್ದಾರೆ. ಯುವ ಜನಾಂಗ ಗುಲಾಮರಾಗಬಾರದು ಎಂದರು.

ಸ್ವಾಭಿಮಾನ ಭಾರತ ನಿರ್ಮಾಣವಾಗಬೇಕು. ವ್ಯಕ್ತಿತ್ವಗಳು ನಿರ್ಮಾಣವಾಗಬೇಕು. ಕಾರ್ಮಿಕರಿಗೆ ಸಹಾಯ, ಸಹಕಾರ, ಅವರಿಗೆ ಸಿಗಬೇಕು. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.  ಆದಾಯ ದ್ವಿಗುಣಗೊಳಿಸಬೇಕು ಎಂದು ಹೇಳಿದರು.

Advertisement

ರಾಜ್ಯ ಅಸಂಘಟಿತ ಕಾರ್ಮಿಕ ಪ್ರಕೋಷ್ಟಕ ಸಂಚಾಲಕ ಬ್ಯಾಟರಂಗೇಗೌಡ ಮಾತನಾಡಿ, ರಾಜ್ಯ ದಲ್ಲಿ ಶೇ.50 ರಷ್ಟು ಮಂದಿ ಅಸಂಘಟಿತರಾಗಿದ್ದಾರೆ.75 ವರ್ಗದವರನ್ನು ಸಂಘಟಿಸಬೇಕಾಗಿದೆ. ಶ್ರಮಿಕವರ್ಗಕ್ಕೆ ಶಕ್ತಿ ತುಂಬಿಸಿ ಅವರನ್ನು ಆರ್ಥಿಕವಾಗಿಸಬಲರನ್ನಾಗಿ ಮಾಡಬೇಕಾಗಿದೆ. ಪಕ್ಷದ ಸಿದ್ಧಾಂತ ಗಳನ್ನು ಉಳಿಸಬೇಕು. ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಬೇಕಾಗಿದೆ ಎಂದರು.

1200 ಕೋಟಿ ರೂ.ಗಳನ್ನು ಈ ವರ್ಗಕ್ಕೆ ಮೀಸಲಿಡಲಾಗಿದೆ. 650 ಕೋಟಿ ರೂ. ಕಾರ್ಮಿಕ ವರ್ಗಕ್ಕೆ ನೀಡಲಾಗಿದೆ. 65 ಸಾವಿರ ಮಂದಿಗೆ ನೇರವಾಗಿ ಖಾತೆಗೆ ಜಮಾ ಆಗಿದೆ. 1.20 ಲಕ್ಷ ಮಂದಿಗೆ ಈಸೌಲಭ್ಯ ಸಿಕ್ಕಿದೆ. ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾರ್ಯಕರ್ತರು ವಿಫ‌ಲರಾಗುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವ ಯಾವ ವರ್ಗಕ್ಕೆ ನೀಡಿದೆ ಎನ್ನುವುದನ್ನು ಬೂತ್‌ ಮಟ್ಟದಲ್ಲಿ ತಿಳಿಸಬೇಕಾಗಿದೆ ಎಂದರು.

ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ರಾಜ್ಯ ಸಂಚಾಲಕ ಭಾನು ಪ್ರಕಾಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಕೋಷ್ಟದಸಂಚಾಲಕ ಅಂಬರೀಶ್‌ ಗೌಡ, ರಾಜ್ಯ ಸಹ ಸಂಚಾಲಕ ವೆಂಕಟೇಶ್‌, ವೀರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next