Advertisement

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಇನ್‌ಸ್ಟಾಗ್ರಾಂ ವಿಲೀನ?

02:52 AM Jan 27, 2019 | |

ವಾಷಿಂಗ್ಟನ್‌: ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಶೀಘ್ರದಲ್ಲೇ ವಾಟ್ಸ್‌ಆ್ಯಪ್‌ ಹಾಗೂ ಇನ್‌ಸ್ಟಾಗ್ರಾಂ ಅನ್ನು ವಿಲೀನಗೊಳಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂರೂ ಅಪ್ಲಿಕೇಶನ್‌ಗಳು ಪ್ರತ್ಯೇಕವಾಗಿಯೇ ಕೆಲಸ ಮಾಡಲಿವೆ. ಆದರೆ, ಸಂದೇಶ ಕಳುಹಿಸುವ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಲಿದೆ. ಯಾವುದೇ ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ವಾಟ್ಸ್‌ ಆ್ಯಪ್‌ನಲ್ಲಿರುವವರಿಗೂ ಸಂದೇಶ ಕಳುಹಿಸುವುದು ಈ ಬದಲಾವಣೆಯ ನಂತರ ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮೂರೂ ಅಪ್ಲಿಕೇಶನ್‌ಗಳು ಫೇಸ್‌ಬುಕ್‌ ಮಾಲಕತ್ವದ್ದೇ ಆದರೂ, ಪ್ರತ್ಯೇಕವಾಗಿಯೇ ಕೆಲಸ ಮಾಡುತ್ತಿವೆ. ಈ ಬದಲಾವಣೆ ಈ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ಇಡೀ ವ್ಯವಸ್ಥೆಯೇ ಬದಲಾಗಬೇಕಿದೆ ಎಂದು ಫೇಸ್‌ಬುಕ್‌ ಅಧಿಕಾರಿಗಳು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next