Advertisement

ಎಲೆಕ್ಷನ್‌ವಾರ್‌ಗೆ ಫೇಸ್‌ಬುಕ್‌ವಾರ್‌ ರೂಂ

01:00 AM Mar 12, 2019 | Team Udayavani |

ಮಣಿಪಾಲ: ಈ ಚುನಾವಣೆಗೆ ಫೇಸ್‌ಬುಕ್‌ನ ವಾರ್‌ ರೂಂ’ ಸಿದ್ಧಗೊಳ್ಳುತ್ತಿದೆ. ಅಮೆರಿಕದ ಕಳೆದ ಚುನಾವಣೆಯ ಸಂದರ್ಭ ನಕಲಿ ಖಾತೆಗಳು ಹಾಗೂ ಮಾಹಿತಿ ರವಾನೆಯನ್ನು ಪತ್ತೆ ಹಚ್ಚಿ ನಾಶ ಮಾಡಲು ಹುಟ್ಟಿಕೊಂಡಿದ್ದು ಈ ವಾರ್‌ ರೂಂ.’ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳು ಅಥವಾ ಪೇಜ್‌/ಗ್ರೂಪ್‌ಗ್ಳನ್ನು ತೆರೆದು ಅವುಗಳ ಮುಖಾಂತರ ಸುದ್ದಿ /ಸುಳ್ಳು ಸುದ್ದಿಗಳ ಹರಿಯಬಿಡಲಾಗುತ್ತದೆ. ಇದೇ ರೀತಿ ಚುನಾವಣ ಸಂದರ್ಭ ಹರಿದಾಡುವ ನಕಲಿ ಸುದ್ದಿಗಳ ಪ್ರವಾಹವನ್ನು ತಡೆಯಲು ಫೇಸ್‌ಬುಕ್‌ ಒಂದೇ ಸೂರಿನಡಿ ನೂರಾರು ಅಧಿಕಾರಿಗಳನ್ನು ನೇಮಿಸಿದೆ. ಇವರು ಪ್ರತಿ ಸಂಶಯಾಸ್ಪದ ಖಾತೆಗಳ ಕುರಿತು ತೀವ್ರ ನಿಗಾ ವಹಿಸು ತ್ತಾರೆ ಎನ್ನುತ್ತದೆ ಕಂಪೆನಿ. ಚುನಾವಣೆ ಘೋಷಣೆಯಾದ ಬಳಿಕ ಪ್ರತಿ ನಡೆಯನ್ನೂ ನಾವು ಟ್ರ್ಯಾಕ್‌ ಮಾಡುತ್ತಿದ್ದೇವೆ’ ಎಂದಿದ್ದರು ಫೇಸ್‌’ಬುಕ್‌ನ ಸಿವಿಕ್‌ ಎಂಗೇಜ್‌ಮೆಂಟ್‌ ಮುಖ್ಯಸ್ಥ ಸಮೀದ್‌ ಚಕ್ರವರ್ತಿ. 

Advertisement

ಫೇಸ್‌ಬುಕ್‌ ಕೇಂದ್ರ ಕಚೇರಿ ಮೆನೊÉà ಪಾರ್ಕ್‌ ನಲ್ಲಿರುವ ವಾರ್‌ ರೂಂ ವಿಭಾಗದಲ್ಲಿ 24 ಅಧಿಕಾರಿ ಗಳಿದ್ದು, 17 ದೊಡ್ಡ ಸ್ಕ್ರೀನ್‌ಗಳಲ್ಲಿ ನಕ‌ಲಿ ಖಾತೆಗಳ ಮೇಲೆ ನಿಗಾ ಇರಿಸುತ್ತಾರೆ. ಅನಂತರ ನಕಲಿ ಖಾತೆ ಗಳನ್ನು  ಸ್ತಂಭನಗೊಳಿಸಲಾಗುತ್ತದೆ.

ವೈಷಮ್ಯದ ಭಾಷಣಕ್ಕೂ ಕತ್ತರಿ
ರಾಜಕಾರಣಿಗಳ ಕೀಳು ಹೇಳಿಕೆಗಳನ್ನು ಫೇಸ್‌ಬುಕ್‌ ಪ್ರಕಟಿಸುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ಘಟಕವನ್ನೂ ಸ್ಥಾಪಿಸಿದೆ. ಸಾಫ್ಟ್ವೇರ್‌ಗಳನ್ನು ಹೊಂದಲಾಗಿದೆ. ಜತೆಗೆ ಸೇಫ್ಟಿ ಹಾಗೂ ಸೆಕ್ಯುರಿಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜತೆಗೆ 20 ತಂಡಗಳು ಕೆಲಸ ಮಾಡುತ್ತಿದ್ದು, ವಿಶ್ವಾದ್ಯಂತ 20,000 ಉದ್ಯೋಗಿಗಳನ್ನು ನೇಮಿಸಲಾಗಿದೆ. ಇವರು ಫೇಸುºಕ್‌ ಅಲ್ಲದೆ, ವಾಟ್ಸ್‌ ಆ್ಯಪ್‌, ಇನ್‌ಸ್ಟ್ರಾಗ್ರಾಂ ಮೇಲೂ ಕಣ್ಣಿಟ್ಟಿರುತ್ತಾರೆ.

ರಿಸ್ಕ್ ತೆಗೆದುಕೊಳ್ಳಬೇಡಿ
– ಅನಪೇಕ್ಷಿತ ಹೇಳಿಕೆಗಳು ಪೋಸ್ಟ್‌ ಆಗುತ್ತಿದ್ದರೆ ಅನ್‌ಫ್ರೆಂಡ್‌ ಮಾಡಿ. 
– ಅನಪೇಕ್ಷಿತ ಹೇಳಿಕೆಗಳು ಪೋಸ್ಟ್‌ ಆಗುತ್ತಿದ್ದರೆ ನಂಬರ್‌ ಬ್ಲಾಕ್‌ ಮಾಡಿ ಅಥವಾ ಪ್ರತಿಕ್ರಿಯೆ ತೋರಬೇಡಿ.
– ಫ್ರೆಂಡ್‌ ರಿಕ್ವೆಸ್ಟ್‌ ಸ್ವೀಕರಿಸುವಾಗ ಎಚ್ಚರಿಕೆ ವಹಿಸಿ. 
– ದುರುದ್ದೇಶದ, ರಾಜಕೀಯ ಪ್ರೇರಿತ ಹೇಳಿಕೆ ಪೋಸ್ಟ್‌, ಪಾರ್ವಡ್‌ ಮಾಡಲೇಬೇಡಿ.
– ಸುಳ್ಳು ಸುದ್ದಿ ಫಾರ್ವಡ್‌ ಮಾಡಬೇಡಿ.
– ಆಮಿಷಗಳು ಬಂದರೆ ಆಯೋಗಕ್ಕೆ ದೂರು ನೀಡಿ.
– ಅಕೌಂಟ್‌ಗಳು ಹ್ಯಾಕ್‌ ಆದ ಅನುಭವಾದರೆ  ದೂರು ನೀಡಿ.

ನಕಲಿ ಖಾತೆಗಳಿಗೆ ಕೊಕ್‌
2017ರ ಸೆಪ್ಟಂಬರ್‌ನಿಂದ 2018 ರ ಅಕ್ಟೋಬರ್‌ ವರೆಗೆ 200 ಕೋಟಿ ನಕಲಿ ಖಾತೆಗಳನ್ನು ಅಳಿಸಲಾಗಿದೆ. ಸುಳ್ಳು ಸುದ್ದಿ ವೈರಲ್‌ ಆಗುವುದನ್ನೂ ತಡೆಯಲು ಯಾಂತ್ರಿಕ ವಾಗಿ ಆಗದು. ಆದ ಕಾರಣ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೆಲಸವನ್ನು 2016ರ ಡಿಸೆಂಬರ್‌ನಲ್ಲೇ ಆರಂಭಿಸಲಾಗಿತ್ತು.  

Advertisement

ರಾಜಕೀಯ ಜಾಹೀರಾತುಗಳಿಗೆ ಸಂಬಂಧಿಸಿ ದಂತೆ, ಜಾಹೀರಾತು ನೀಡಿದವರ ಸಮಗ್ರ ವಿವರಗಳು ಲಭ್ಯವಾಗಲಿವೆ. ರಾಜಕೀಯ ಜಾಹೀರಾತುಗಳ ಲೈಬ್ರರಿಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಎಲ್ಲ ಜಾಹೀರಾತು ಗಳನ್ನೂ ಬಳಕೆದಾರರು ನೋಡಬಹುದು. 

Advertisement

Udayavani is now on Telegram. Click here to join our channel and stay updated with the latest news.

Next