Advertisement

C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್‌

07:10 PM May 28, 2024 | Team Udayavani |

ಮಸ್ಕಿ:ಪರಿಶಿಷ್ಟ ಸಮುದಾಯಕ್ಕೆ ಬಳಕೆಯಾಗಬೇಕಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ಅನುದಾನ ಕಾಂಗ್ರೆಸ್‌ ಲೂಟಿ ಮಾಡಿ ಲೋಕಸಭೆ ಚುನಾವಣೆಗೆ ಬಳಸಿಕೊಂಡಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಚಂದ್ರಶೇಖರನ್‌ ಡೆತ್‌ನೋಟ್‌ನಲ್ಲಿ ನಿಗಮ ವ್ಯವಸ್ಥಾಪಕ ಹಾಗೂ ಇನ್ನೊಬ್ಬ ಅಧಿಕಾರಿ ಹೆಸರು ಬರೆದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಬಡ ಜನರಿಗೆ ಸೇರಬೇಕಾಗಿರುವ 187 ಕೋಟಿ ರೂ.ಗಳನ್ನು ನಕಲಿ ಖಾತೆಗೆ ವರ್ಗಾವಣೆ ಮಾಡಿ ಕಾಂಗ್ರೆಸ್‌ ಹಗಲು ದರೋಡೆ ಮಾಡಿದೆ.

ಈ ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಾಗ ಸಚಿವರನ್ನು ವಜಾ ಮಾಡುವಂತೆ ಕಾಂಗ್ರೆಸ್‌ ಆರೋಪಿಸಿತ್ತು. ವಾಲ್ಮೀಕಿ ನಿಗಮ ಅಧೀ ಕ್ಷಕ ಆತ್ಯಹತ್ಯೆಗೆ ಒಳಗಾಗಿ 24 ಗಂಟೆ ಕಳೆಯಿತು. ಆದರೆ ಸಿಎಂ ಸಿದ್ದರಾಮಯ್ಯ ಏನು ಕ್ರಮ ತೆಗೆದುಕೊಂಡಿದ್ದಾರೆ? ವಾಲ್ಮೀಕಿ ನಿಗಮದ ಅಧಿ ಕಾರಿ ಸಾವಿನ ಸುತ್ತ ಕಾಣದ ಕೈಗಳಿವೆ. ಈ ಪ್ರಕರಣವನ್ನು ಕೊಲೆ ಮೊಕದ್ದಮೆ ಎಂದು ದಾಖಲಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು, ತಪಿಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next