Advertisement

ಯಶ್‌-ರಕ್ಷಿತ್‌ ಅಭಿಮಾನಿಗಳ ಫೇಸ್‌ಬುಕ್‌ ವಾರ್‌

11:54 AM May 08, 2017 | |

ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ಗಳ ಅಭಿಮಾನಿಗಳ ಮಧ್ಯೆ ಅದ್ಯಾವಾಗ ಕಿಡಿ ಹತ್ತಿಕೊಳ್ಳುತ್ತೇ ಅನ್ನೋದನ್ನು ಹೇಳ್ಳೋದು ಕಷ್ಟ. ಕೆಲವೊಮ್ಮೆ ಯಾರೋ ಒಬ್ಬ ಅಭಿಮಾನಿಯ ಕಾಮೆಂಟ್‌ ಇನ್ನೊಬ್ಬ ನಟನ ಅಭಿಮಾನಿಯನ್ನು ಕೆರಳಿಸುತ್ತದೆ. ಈಗ ಹೊಸದಾಗಿ ಫೇಸ್‌ಬುಕ್‌ನಲ್ಲಿ ಯಶ್‌ ಹಾಗೂ ರಕ್ಷಿತ್‌ ಶೆಟ್ಟಿ ಅಭಿಮಾನಿಗಳು ಪರಸ್ಪರ ಜಗಳವಾಡುತ್ತಿದ್ದಾರೆ.

Advertisement

ಅವರ ಈ ಪರಸ್ಪರ ವಾದ-ವಿವಾದಗಳಿಗೆ ಕಾರಣ ಜೀ ವಾಹಿನಿಯ “ವೀಕೆಂಡ್‌ ವಿಥ್‌ ರಮೇಶ್‌’ ಶೋನ ಸಾಧಕರ ಸೀಟಿಗೆ ರಕ್ಷಿತ್‌ ಶೆಟ್ಟಿ ಬಂದಿರೋದು. ಈಗಷ್ಟೇ ಚಿತ್ರರಂಗದಲ್ಲಿ ಬೆಳೆಯುತ್ತಿರುವ ರಕ್ಷಿತ್‌ ಹೇಗೆ ಸಾಧಕರಾಗುತ್ತಾರೆಂಬ ಪ್ರಶ್ನೆಯನ್ನು ಕೆಲವರ ಫೇಸ್‌ಬುಕ್‌ನಲ್ಲಿ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬ “ಈ ಹಿಂದೇ ಇದೇ ಸೀಟಿಗೆ ಯಶ್‌ ಬಂದಾಗ ಯಾರು ಏನೂ ಅನ್ನಲಿಲ್ಲ.

ಈಗ ರಕ್ಷಿತ್‌ ಬಂದಾಗ ಯಾಕೆ ಮಾತನಾಡಬೇಕು’ ಎಂದು ಕಾಮೆಂಟ್‌ ಮಾಡಿದ್ದರು. ಹೀಗೆ ಆರಂಭವಾದ ಫೇಸ್‌ಬುಕ್‌ ವಾರ್‌ ಜೋರಾಗಿಯೇ ನಡೆಯುತ್ತಿದೆ. ಯಶ್‌ ಅಭಿಮಾನಿಗಳು “ನಮ್‌ ಯಶ್‌  ಬಾಸ್‌ ಸುದ್ದಿಗೆ ಬಂದರೆ ನಾವು ಸುಮ್ಮನೆ ಇರಲ್ಲ’ ಎಂದು ಕಾಮೆಂಟ್‌ ಮಾಡುವ ಮೂಲಕ ಇಬ್ಬರು ಅಭಿಮಾನಿಗಳ ಮಧ್ಯೆ ವಾದ-ವಿವಾದ ನಡೆಯುತ್ತಿದೆ. ಅತ್ತ ಕಡೆ ಯಶ್‌ ಪರ, ಇತ್ತ ಕಡೆ ರಕ್ಷಿತ್‌ ಪರ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಲೇ ಇದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್‌ ನಟರ ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುವುದು ಹೊಸದೇನಲ್ಲ. ಈಗಾಗಲೇ ಕನ್ನಡ ಚಿತ್ರರಂಗದ ಕೆಲವು ಸ್ಟಾರ್‌ ನಟರ ಅಭಿಮಾನಿಗಳು ವಾದ-ವಿವಾದ ಮಾಡಿಕೊಳ್ಳುತ್ತಲೇ ಇದ್ದಾರೆ. ಈಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರೋದು ರಕ್ಷಿತ್‌ ಶೆಟ್ಟಿ ಅಭಿಮಾನಿಗಳು. ಈ ಫೇಸ್‌ಬುಕ್‌ ವಾರ್‌ ಎಲ್ಲಿಗೆ ಹೋಗಿ ಮುಟ್ಟುತ್ತೋ ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next