– ವಿದೇಶ ಸಚಿವಾಲಯದಿಂದ ಸಾಮಾಜಿಕ ತಾಣ ಸಮರ್ಪಕ ಬಳಕೆ
– ಸೋಷಿಯಲ್ ಮೀಡಿಯಾ ನಿರ್ವಹಣೆಗೆ 14 ತಜ್ಞರು: ವಿಕಾಸ್
Advertisement
ಬೆಂಗಳೂರು: ಅನಿವಾಸಿ ಭಾರತೀಯರನ್ನು ತಲುಪಲು ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
Related Articles
Advertisement
ಸಾಮಾಜಿಕ ಜಾಲತಾಣಗಳು ಭಾರತ ಬಿಟ್ಟುಹೋದವರನ್ನು ಅತ್ಯಂತ ವೇಗವಾಗಿ ತಲುಪಲು ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿವೆ. ವಿದೇಶಾಂಗ ಸಚಿವಾಲಯ ಸಾಮಾಜಿಕ ಜಾಲತಾಣ ನಿರ್ವಹಣೆಗೆ 14 ಜನ ತಜ್ಞರನ್ನು ನೇಮಕ ಮಾಡಿಕೊಂಡಿದೆ ಎಂದು ಹೇಳಿದರು.
ಫೇಸ್‌ಬುಕ್, ಟ್ವೀಟರ್ ಮತ್ತಿತರ ಸಾಮಾಜಿಕ ಜಾಲ ತಾಣಗಳ ಪೈಕಿ ವ್ಯಾಟ್ಸ್‌ಆ್ಯಪ್ ಹೆಚ್ಚು ಬಳಕೆಯಾಗುತ್ತದೆ. ಆ ಮಾಧ್ಯಮದ ಮೂಲಕವೇ ಅನಿವಾಸಿಗಳು ಹೆಚ್ಚು ವ್ಯವಹರಿಸುತ್ತಾರೆ ಎಂದು ತಿಳಿಸಿದರು.
ಕೊಲ್ಲಿ ರಾಷ್ಟ್ರಗಳು, ಇಸ್ರೇಲ್ ಮತ್ತಿತರ ಭಾಗಗಳಲ್ಲಿನ ಅನಿವಾಸಿ ಭಾರತೀಯರನ್ನು ನಾವು ಸಾಮಾಜಿಕ ಜಾಲತಾಣಗಳ ಮೂಲಕವೇ ಸಂಪರ್ಕಿಸಿದ್ದೇವೆ ಎಂದರು.
ದುರ್ಬಳಕೆ ಬೇಡ: ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಎಂ.ಜೆ. ಅಕºರ್ ಮಾತನಾಡಿ, ನಿತ್ಯ ಜೀವನದ ಅಗುಹೋಗುಗಳಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವದ ಪಾತ್ರ ವಹಿಸುತ್ತಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಪ್ರತಿಯೊಬ್ಬರೂ ಯೋಚಿಸಬೇಕು. ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಲಹೆ ಮಾಡಿದರು. ಮೋದಿ ಪ್ರಧಾನಿ ಆದ ಮೇಲೆ ತಂತ್ರಜಾnನವನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೋಟು ರದ್ದತಿ ತರುವಾಯ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇನ್ನು ಭಾರತದಲ್ಲಿ ಹೂಡಿಕೆ ಮಾಡುವುದು ಕಷ್ಟ ಎಂಬ ಸುದ್ದಿಯನ್ನು ಬಿತ್ತರಿಸಿದ್ದರು. ಸರ್ಕಾರ ಇದೇ ತಾಣಗಳನ್ನು ಬಳಸಿಕೊಂಡು ಅದಕ್ಕೆ ಉತ್ತರ ನೀಡುವಲ್ಲಿ ಯಶಸ್ವಿಯಾಗಿದೆ.