Advertisement

ಇನ್ಮುಂದೆ ಪಾಸ್ ವರ್ಡ್ ಬೇಡ, ಮುಖ ತೋರಿಸಿದ್ರೆ Facebook ಓಪನ್!

05:01 PM Sep 30, 2017 | |

ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್ ಬುಕ್ ನಲ್ಲಿ ಅನ್ನು ಓಪನ್ ಮಾಡಲು ಪಾಸ್ ವರ್ಡ್ ದಾಖಲಿಸುವ ಅಗತ್ಯ ಇರುವುದಿಲ್ಲ, ಆ ನಿಟ್ಟಿನಲ್ಲಿ ಫೇಸ್ ಬುಕ್ ಗ್ರಾಹಕರ ಖಾತೆಯ ಭದ್ರತೆಗಾಗಿ ನಿಮ್ಮ ಮುಖದ ಗುರುತೇ ಫೇಸ್ ಬುಕ್ ಪಾಸ್ ವರ್ಡ್ ಆಗಲಿದೆ ಎಂದು ವರದಿ ತಿಳಿಸಿದೆ.

Advertisement

ನಮ್ಮ, ನಮ್ಮ ಫೇಸ್ ಬುಕ್ ಖಾತೆ ಓಪನ್ ಮಾಡಲು ನಮ್ಮ ಮುಖದ ಗುರುತನ್ನು ಗುರುತಿಸುವ ಮೂಲಕ ಫೇಸ್ ಬುಕ್ ಫೇಸ್ ಲಾಕ್ ಆಗುವ ವಿಶೇಷ ತಂತ್ರಜ್ಞಾನ ಆವಿಷ್ಕಾರದಲ್ಲಿ ತೊಡಗಿದೆ ಎಂದು ಹೇಳಿದೆ.

ಫೇಸ್ ಬುಕ್ ಖಾತೆದಾರರ ಖಾತೆ ಶೀಘ್ರವೇ ವೆರಿಫೈ ಆಗಿ ಓಪನ್ ಆಗುವ ಹೊಸ ತಂತ್ರಜ್ಞಾನದ ಪರೀಕ್ಷೆಯಲ್ಲಿ ನಾವು ತೊಡಗಿದ್ದೇವೆ. ಈಗಾಗಲೇ ಲಾಗ್ ಇನ್ ಹೊಂದಿರುವವರು ಈ ಆಯ್ಕೆಯ ಫೀಚರ್ ಅನ್ನು ಪಡೆಯಬಹುದಾಗಿದೆ. ಖಾತೆದಾರರ ಮುಖವೇ ಪಾಸ್ವರ್ಡ್ ಮಾಡಲಾಗುತ್ತಿರುವ ಪ್ರಯತ್ನ ಸದ್ಯ ಅನ್ವೇಷಣೆ ಹಂತದಲ್ಲಿದ್ದು, ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದೆ. ಫೇಸ್ಬುಕ್ ಖಾತೆದಾರರಿಗೆ ಸುಲಭವಾಗಿ ಬಳಕೆ ಮಾಡುವ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಂದು ಫೇಸ್ ಬುಕ್ ಟೆಕ್ ಕ್ರಂಚ್ ಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next