Advertisement

ರಿಲಯನ್ಸ್ ಜಿಯೋದ ಶೇ. 9.99 ಷೇರನ್ನು 5.7 ಬಿಲಿಯನ್ ಡಾಲರ್ ಗೆ ಖರೀದಿಸಿದ ಫೇಸ್ ಬುಕ್

09:01 AM Apr 23, 2020 | Mithun PG |

ನವದೆಹಲಿ: ತಂತ್ರಜ್ಞಾನ ದೈತ್ಯ ಫೇಸ್ ಬುಕ್, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ರಿಲಾಯನ್ಸ್ ಜಿಯೋದಲ್ಲಿ ಶೇ 9.99ರಷ್ಷರ  ಶೇರುಗಳನ್ನು ಖರೀದಿಸಿದೆ. ಈ ಷೇರಿನ ಮೌಲ್ಯ 5.7 ಬಿಲಿಯನ್ ಡಾಲರ್ (43,574 ಕೋಟಿ ರೂಪಾಯಿ) ಆಗಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

Advertisement

ಆ ಮೂಲಕ ಫೇಸ್ ಬುಕ್, ಉದ್ಯಮಿ ಮುಕೇಶ್​ ಅಂಬಾನಿ ಒಡೆತನದ ಜಿಯೋದಲ್ಲಿ  ಹೂಡಿಕೆ ಮಾಡುವ ಮುಖಾಂತರ ಶೇ. 9.9 ರಷ್ಟು ಪಾಲುದಾರಿಕಯನ್ನು ತನ್ನದಾಗಿಸಿಕೊಂಡಿದೆ.

ಈ ಬೆಳವಣಿಗೆ ಕುರಿತು ಮಾಹಿತಿ ನೀಡಿದ ರಿಲಾಯನ್ಸ್​ ಇಂಡಸ್ಟ್ರೀಸ್ ​’ಟೆಲಿಕಾಂ ಸಂಸ್ಥೆಯಲ್ಲಿ ಇಂತಹ ಅಭೂತಪೂರ್ವ ಬೆಳವಣಿಗೆ ಹಿಂದೆಂದೂ ನಡೆದಿರಲಿಲ್ಲ. ಭಾರತದ ಜನರ ಹಾಗೂ ಭಾರತದ ಆರ್ಥಿಕತೆಗೆ ಅಗತ್ಯವಿರುವುದನ್ನು ಪೂರೈಸುವ ಮೂಲಕ ಈ ಪಾಲುದಾರಿಕೆಯು ಭಾರತದ ಸರ್ವತೋಮುಖ ಬೆಳವಣಿಗೆಗೆ ಪುಷ್ಟಿ ನೀಡಲಿದೆ   ಎಂದಿದೆ.

2016ರಲ್ಲಿ ಡಿಜಿಟಲ್​ ಸರ್ವೋದಯದ ಕನಸು ಕಂಡು ನಾವು ಜಿಯೋ ಸಂಸ್ಥೆಯನ್ನು ಆರಂಭಿಸಿದೆವು. ಇದೀಗ ಇಡೀ ಜಗತ್ತು ಡಿಜಿಟಲೀಕರಣವಾಗಿದೆ. ಈ ವೇಳೆ ಭಾರತೀಯರೂ ಡಿಜಿಟಲ್​ ಯುಗದಲ್ಲಿ ಮುಂದೆ ಬರಬೇಕು ಎಂಬುದು ನಮ್ಮ ಆಶಯವಾಗಿತ್ತು. ಈಗ ಈ ವಿಚಾರದಲ್ಲಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಹೀಗಾಗಿ, ಫೇಸ್​ಬುಕ್​ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ,”  ಎಂದು  ​ಆರ್ ​ಐಎಲ್​ ಮುಖ್ಯಸ್ಥ ಮುಕೇಶ್​ ಅಂಬಾನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next