Advertisement

ಮತ್ತೆ ಎಫ್ ಬಿ, ಇನ್ಸ್ಟಾಗ್ರಾಮ್ ಸರ್ವರ್ ಡೌನ್: ಕ್ಷಮೆಯಾಚಿಸಿದ ಫೇಸ್ ಬುಕ್

09:22 AM Oct 09, 2021 | Team Udayavani |

ಹೊಸದಿಲ್ಲಿ: ಸಾಮಾಜಿಕ ಜಾಲತಾಣದ ಪ್ರಭಾವಿ ಆ್ಯಪ್ ಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಆ್ಯಪ್ ಗಳ ಸರ್ವರ್ ವಾರದಲ್ಲಿ ಎರಡನೇ ಬಾರಿ ಡೌನ್ ಆಗಿದೆ. ಇದಕ್ಕಾಗಿ ಫೇಸ್ ಬುಕ್ ತನ್ನ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ.

Advertisement

“ನಮ್ಮ ಆಪ್‌ಗಳು ಮತ್ತು ಉತ್ಪನ್ನಗಳನ್ನು ಬಳಸುವಲ್ಲಿ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು ನಮಗೆ ತಿಳಿದಿದೆ. ಸಾಧ್ಯವಾದಷ್ಟು ಬೇಗನೆ ಸಾಮಾನ್ಯ ಸ್ಥಿತಿಗೆ ಮರಳಲು ನಾವು ಕೆಲಸ ಮಾಡುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ” ಎಂದು ಫೇಸ್‌ಬುಕ್ ರಾತ್ರಿ 12 ಗಂಟೆಗೆ ಟ್ವೀಟ್ ಮಾಡಿದೆ.

ಸೋಮವಾರವಷ್ಟೇ ಸತತ 6 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸಪ್ ಮೆಸೆಂಜರ್ ಸೇವೆ ಸ್ಥಗಿತಗೊಂಡಿತ್ತು. ಇದೀಗ ಶುಕ್ರವಾರ ಮತ್ತೆ ಎರಡು ಗಂಟೆಗಳ ಕಾಲ ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಇದನ್ನೂ ಓದಿ:ಏರ್‌ ಇಂಡಿಯಾ ಘರ್‌ ವಾಪಸಿ: ಬಂಡವಾಳ ವಾಪಸ್‌ ಮಾಡುವ ಹಿಂದಿನ ಕಥೆ ಏನು?

ಎರಡು ಗಂಟೆಗಳ ಕಾಲ ಮತ್ತೆ ಫೇಸ್‌ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಎಫ್ ಬಿ ಹೇಳಿದೆ.

Advertisement

ಸೋಮವಾರ ಫೇಸ್​​ಬುಕ್​, ವ್ಯಾಟ್ಸಪ್​, ಇನ್ಸ್ಟಾಗ್ರಾಮ್, ಮೆಸೆಂಜರ್ ಅಪ್ಲಿಕೇಷನ್​ಗಳು ಮಾರ್ಕ್ ಜುಕರ್​​ಬರ್ಗ್ ಕೆಲವೇ ಕೆಲವು ಗಂಟೆಗಳು ಸ್ಥಗಿತಗೊಂಡ ಕಾರಣದಿಂದ ಮಾರ್ಕ್ ಜುಕರ್ ಬರ್ಗ್ 7 ಬಿಲಿಯನ್ ಡಾಲರ್ ನಷ್ಟಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ.

ಫೇಸ್‌ ಬುಕ್‌ಗೆ ಬ್ಯಾಡ್‌ “ಟೈಮ್‌’: ಫೇಸ್‌ಬುಕ್‌ನಿಂದ ಸಮಾಜದಲ್ಲಿ ವಿಷಯ, ಸಿದ್ಧಾಂತಗಳ ಆಧಾರದಲ್ಲಿ ಸಮುದಾಯಗಳ ನಡುವೆ ವಿಭಜನೆ ಗಳು ಉಂಟಾಗುತ್ತಿವೆ. ಮಕ್ಕಳಿಗೆ ಫೇಸ್‌ಬುಕ್‌ ಮಾರಕವಾಗಿದೆ. ಇದನ್ನು ನಿಯಂತ್ರಿಸಲು ಮುಂದಾಗದ ಫೇಸ್‌ ಬುಕ್‌, ತನ್ನ ಲಾಭದ ಮೇಲಷ್ಟೇ ತನ್ನ ಗಮನ ಕೇಂದ್ರೀಕರಿಸಿದೆ ಎಂಬ ಅರ್ಥದ ಲೇಖನ “ಟೈಮ್‌’ ನಿಯತಕಾಲಿಕೆ ಜಾಲತಾಣದಲ್ಲಿ ಪ್ರಕಟವಾಗಿದೆ.

ತನ್ನ ಮುಖಪುಟದಲ್ಲಿ ಫೇಸ್‌ಬುಕ್‌ ಸಂಸ್ಥಾಪಕ, ಸಂಸ್ಥೆಯ ಮುಖ್ಯಸ್ಥ ಮಾರ್ಕ್‌ ಝುಗರ್‌ ಬರ್ಗ್‌ ಫೋಟೋ ವನ್ನು ಹಾಕಿ, ಅದರ ಮೇಲೆ “ಡಿಲೀಟ್‌ ಫೇಸ್‌ಬುಕ್‌?’ ಎಂಬ ಪ್ರಶ್ನೆ ಯನ್ನು ಓದುಗರ ಮುಂದಿಟ್ಟಿದ್ದು, ಅದಕ್ಕೆ “ಡಿಲೀಟ್‌’ ಅಥವಾ “ಕ್ಯಾನ್ಸಲ್‌’ ಎಂಬ ಎರಡು ಆಯ್ಕೆಗಳನ್ನೂ ನೀಡಿದೆ.

ಫೇಸ್‌ಬುಕ್‌ ತನ್ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶ ದಿಂದ ತಂಡ ರಚಿಸಿತ್ತು. ಅದರ ಕಾರ್ಯ ನಿರ್ವಹಣೆಗೆ ಜಾಲತಾಣವೇ ಅಡ್ಡಿಯಾಗಿತ್ತು ಎಂದು ಲೇಖನದಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next