Advertisement

2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದ ಫೇಸ್ ಬುಕ್: ನಿಮ್ಮ ಅಕೌಂಟ್ ಎಷ್ಟು ಸುರಕ್ಷಿತ ?

09:50 AM Nov 16, 2019 | Mithun PG |

ನ್ಯೂಯಾರ್ಕ್:  ಫೇಸ್ ಬುಕ್ ತನ್ನ ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸುವ ದೃಷ್ಟಿಯಿಂದ ಹಿಂಸೆಗೆ ಪ್ರಚೋದಿಸುವ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ 2.5 ಮಿಲಿಯನ್ ಪೋಸ್ಟ್ ಗಳನ್ನು ಕಿತ್ತೆಸೆದಿದೆ. ಅದರ ಜೊತೆಗೆ 4.4 ಮಿಲಿಯನ್ ಡ್ರಗ್ಸ್ ಮಾರಾಟ ಮಾಡುವ ಕುರಿತಾದ ಜಾಹೀರಾತು ಪೋಸ್ಟ್ ಗಳನ್ನು ತೆಗೆದುಹಾಕಿದೆ.

Advertisement

ಫೇಸ್​ಬುಕ್​ನಲ್ಲಿ ನಕಲಿ ಖಾತೆಗಳ ಹಾವಳಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಎಪ್ರಿಲ್​ ಮತ್ತು ಸೆಪ್ಟಂಬರ್ ನಡುವೆ ​ 350 ಕೋಟಿ​ ನಕಲಿ ಖಾತೆಗಳು ಪತ್ತೆಯಾಗಿವೆ. ಈ ಬಗ್ಗೆಕಠಿಣ ಕ್ರಮ ತೆಗೆದುಕೊಂಡಿರುವ ಫೇಸ್​ಬುಕ್​ ಸಂಸ್ಥೆ ನಕಲಿ ಖಾತೆಗಳನ್ನು ನಿಷ್ಕ್ರೀಯಗೊಳಿಸಿದೆ.  ಮಾತ್ರವಲ್ಲದೆ, ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸಿದೆ. ಫೇಸ್​ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ನಕಲಿ ಖಾತೆಗಳನ್ನು ಸೃಷ್ಠಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಕಳೆದ ವರ್ಷ ಏಪ್ರಿಲ್​ ಮತ್ತು ನವೆಂಬರ್​ 1.5 ಬಿಲಿಯನ್​ ಫೇಕ್​ ಅಕೌಂಟ್​ಗಳು ಪತ್ತೆಯಾಗಿದ್ದವು. ಅದರ ಜೊತೆಗೆ ಅವಹೇಳನಕಾರಿ ಸಂದೇಶ ರವಾನಿಸುವ ಖಾತೆಗಳನ್ನು ಫೇಸ್​ಬುಕ್​ ಕಿತ್ತುಹಾಕಿತ್ತು. ಇದೀಗ ಮತ್ತಷ್ಟು ಎಚ್ಚರಿಕೆಗೊಂಡ ಫೇಸ್​ಬುಕ್​,  ಇನ್​ ಸ್ಟಾಗ್ರಾಂನಲ್ಲೂ ಕೂಡ ಅವಹೇಳನಕಾರಿ ಸಂಗತಿಗಳನ್ನು ಹರಿಯ ಬಿಡುವ ಅಥವಾ ಲೈಂಗಿಕತೆಯ ಬಗೆಗಿನ ಸಂದೇಶವನ್ನು, ತುಣುಕುಗಳನ್ನು ಹರಿಯ ಬಿಡುತ್ತಿದ್ದ 8.64 ಮಿಲಿಯನ್​ ಖಾತೆಗಳನ್ನು ತೆಗೆದು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next