Advertisement

ಫೇಸ್ ಬುಕ್ ಹೊಸ ವಿನ್ಯಾಸ: ಲೈಕ್ ಬಟನ್ ಡಿಲೀಟ್

04:23 PM Jan 09, 2021 | Team Udayavani |

ನವದೆಹಲಿ: ವಿಶ್ವದ ಬಹುದೊಡ್ಡ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ತನ್ನ ಪಬ್ಲಿಕ್ ಪೇಜ್ ಅನ್ನು ಮರು  ವಿನ್ಯಾಸಗೊಳಿಸಲು ನಿರ್ಧರಿಸಿದೆ. ಆ ಮೂಲಕ ಸಾರ್ವಜನಿಕ ಪುಟಗಳಿಗೆ ನೀಡಲಾಗಿದ್ದ ಲೈಕ್ ಬಟನ್ ಅನ್ನು ತೆಗೆದು ಹಾಕಲು ಸಂಸ್ಥೆ ಮುಂದಾಗಿದೆ.

Advertisement

ಫೇಸ್ ಬುಕ್ ಲ್ಲಿ ಈ ಹಿಂದೆ ಲೈಕ್ ಹಾಗೂ ಫಾಲೋವಿಂಗ್ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದ್ದು, ಇದೀಗ ಲೈಕ್ ಬಟನ್ ಅನ್ನು ತೆಗೆದು ಹಾಕಲು ಸಂಸ್ಥೆ ತಯಾರಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಫೇಸ್ ಬುಕ್ ತಮಗೆ ಇಷ್ಟವಾದ ಪುಟಗಳನ್ನು ಜನರು ಅತ್ಯಂತ ಸುಲಭವಾಗಿ ತಲುಪುವಂತೆ ಮಾಡಲು ಈ ನಿರ್ಧಾರವನ್ನು ಕೈಗೊಂಡಿದ್ದು, ಲೈಕ್ ಬಟನ್ ಬದಲಿಗೆ ಫಾಲೋವರ್ ಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದೇವೆ  ಎಂದಿದೆ.

ಇದನ್ನೂ ಓದಿ:ಡಿ ಕೆ ಶಿವಕುಮಾರ್ ಗೆ ಜನ ಬೆಂಬಲವಿಲ್ಲ,ಕಾರ್ಯಕರ್ತರ ಬೆಂಬಲವೂ ಇಲ್ಲ: ಶೋಭಾ ಕರಂದ್ಲಾಜೆ

ಇನ್ನು ಮುಂದೆ ವೈಯಕ್ತಿಕ ಖಾತೆ ಹಾಗೂ ಪೇಜ್ ಗಳನ್ನು ಅತ್ಯಂತ ಸುಲಭವಾಗಿ ಹುಡುಕಬಹುದಾಗಿದೆ. ಹೊಸದಾದ ಅಡ್ಮಿನ್ ಕಂಟ್ರೋಲ್ ಮೂಲಕ ವಿಶ್ವಾಸಾರ್ಹವಾದ ಪುಟ ನಿರ್ವಹಣಾಕಾರರಿಗೆ ಸಂಪೂರ್ಣ ಅಥವಾ ಭಾಗಶಃ ನಿಯಂತ್ರಣವನ್ನು ನೀಡಬಹುದಾಗಿದೆ.

Advertisement

ಇಷ್ಟೇ ಅಲ್ಲದೆ ಇನ್ನೂ ಹಲವಾರು ಸೌಲಭ್ಯಗಳನ್ನು ಫೇಸ್ ಬುಕ್ ನೀಡಲು ಮುಂದಾಗಿದ್ದು, ಜಾಹಿರಾತುಗಳು ,ಸಮುದಾಯ ಚಟುವಟಿಕೆ ಮತ್ತು ಸಂದೇಶಗಳನ್ನು ಹಲವು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಣೆ  ಮಾಡಲು ವಿವಿಧ ಹಂತದ ಆ್ಯಕ್ಸೆಸ್ ನೀಡಲು ಈ ಹೊಸ ವಿನ್ಯಾಸ ಸಹಕಾರಿಯಾಗಲಿದೆ .

ವಿಶ್ವದಾದ್ಯಂತ ಹಲವಾರು ಸಿನೆಮಾ ತಾರೆಯರು, ರಾಜಕಾರಣಿಗಳನ್ನು ಒಳಗೊಂಡಂತೆ ಪ್ರಭಾವಿ ವ್ಯಕ್ತಿಗಳು ತನ್ನ ಹಿಂಬಾಲಕರನ್ನು ಹಾಗೂ ಅಭಿಮಾನಿಗಳನ್ನು ತಲುಪುವ ನಿಟ್ಟಿನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ತಮ್ಮ ಪಾಲೋವರ್ ಗಳನ್ನು ಹೆಚ್ಚಿಸಿಕೊಳ್ಳಲು ಇದು ಸಹಕಾರಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next