Advertisement

ಫೇಸ್‌ಬುಕ್‌ ದುಡ್‌ ಕೊಡುತ್ತೆ! ಲೈಕ್‌ ತಾಣದಲ್ಲಿ ಲಕ್ಷ ಲಕ್ಷ ಎಣಿಸಿ!

03:09 PM May 22, 2017 | Harsha Rao |

ಫೇಸ್‌ಬುಕ್‌ ಗೋಡೆಯ ಮೇಲೆ ಪೋಸ್ಟ್‌ ಹಾಕಿ, ಕಾಮೆಂಟು, ಲೈಕು ಸ್ವೀಕರಿಸುವ ಪ್ರಪಂಚದ ಬಗ್ಗೆ ನಮಗೆ ಅರಿವಿದೆ. ಆದರೆ, ಶೇರ್‌, ಲೈಕ್‌, ಪೋಸ್ಟ್‌ಗಳನ್ನು ಗಳಿಕೆಯ ದಾರಿಯನ್ನಾಗಿಯೂ ಮಾಡಿಕೊಳ್ಳುವುದು ನಿಮಗೆ ಗೊತ್ತೇ? ಇಲ್ಲಿ ಓದಿ…

Advertisement

ಫೇಸ್‌ಬುಕ್‌ ಇಲ್ಲದಿದ್ದರೆ ನನಗೆ ಆಗೋದೇ ಇಲ್ಲ, ದಿನಕ್ಕೆ ಒಂದು ಬಾರಿಯಾದರೂ ಫೇಸ್‌ಬುಕ್ಕಿಗೆ ಲಾಗ್‌ಆನ್‌ ಆಗದಿದ್ದರೆ ಆ ದಿನ ಏನೋ ಕಳೆದುಕೊಂಡು ಬಿಟ್ಟಿದ್ದೇನೆ ಅನ್ನಿಸುತ್ತಪ್ಪಾ..! ಎಂದು ಹೇಳುವವರನ್ನು ನೋಡಿದ್ದೇವೆ. ಹಳೇ ಸ್ನೇಹಿತರು, ಹೊಸ ಸ್ನೇಹಿತರು, ಕಂಡವರು, ಕಾಣದವರು ತಮ್ಮ ಬರಹ, ಚಿತ್ರ, ದೃಶ್ಯ, ಲೈವ್‌, ಕಾಮೆಂಟ್‌, ಲೈಕ್‌ಗಳ ಮೂಲಕವೇ ಫೇಸ್‌ಬುಕ್‌ನಲ್ಲಿ ಸಂವಹಿಸುತ್ತಾರೆ, ಅದೂ ಉಚಿತವಾಗಿ. ಇವರೆಲ್ಲರೂ ಮಾತನಾಡುವುದೇ ಹಲವರ ಪಾಲಿಗೆ ಗಳಿಕೆಗೆ ದಾರಿಯಾಗುತ್ತದೆಂದರೆ ನಂಬಲು ಅಸಾಧ್ಯ ಅಲ್ಲವೇ? ಇಲ್ಲಿವೆ ಫೇಸ್‌ಬುಕ್‌ನಲ್ಲಿ ಹಣ ಗಳಿಸಲು ಸುಲಭ ದಾರಿಗಳು.

ಫೇಸ್‌ಬುಕ್‌ ಪೇಜ್‌ 
ಫೇಸ್‌ಬುಕ್‌ ಪೇಜ್‌ ಎಂಬ ಸವಲತ್ತನ್ನು ಬಳಸಿಕೊಂಡು ಭಾರತದಲ್ಲಿ ಎಷ್ಟೋ ಚಿಕ್ಕ ಚಿಕ್ಕ ಸ್ಟಾರ್ಟಪ್‌ಗ್ಳು ದೊಡ್ಡ ಸಂಸ್ಥೆಯಾಗಿ ಬೆಳೆದಿವೆ. ಇಲ್ಲಿ ಆಕರ್ಷಕ ಕಂಟೆಂಟ್‌ ಅನ್ನು ಶೇರ್‌ ಮಾಡುತ್ತಾ ಫಾಲೋವರ್ಅನ್ನು ಹೆಚ್ಚಿಸಿಕೊಂಡರೆ ಧನ ಗಳಿಕೆಯೂ ಹೆಚ್ಚುತ್ತದೆ. ಭಾರತದಲ್ಲಿ ಇಂಥ ಅವಕಾಶವನ್ನು ಮೊದಲು ಬಳಿಸಿಕೊಂಡ ಹೆಗ್ಗಳಿಕೆ ಇನ್‌ಶಾರ್ಟ್‌ ಸ್ಟಾರ್ಟ್‌ಅಪ್‌ನದ್ದು. ಕೇವಲ 60 ಪದಗಳ ಸುದ್ದಿಗಳನ್ನು ಬಿತ್ತರ ಮಾಡುತ್ತಾ ಕೆಲಸ ಪಾರಂಭಿಸಿದ ಈ ಕಂಪನಿ ಈಗ ಲಕ್ಷಾಂತರ ರೂ. ಗಳಿಕೆ ಮಾಡುವ ಸಂಸ್ಥೆಯಾಗಿ ಬೆಳೆದಿದೆ. ಅಮೇಜಾನ್‌ ಸೇರಿದಂತೆ ಅನೇಕ ವ್ಯಾಪಾರಿ ಸಂಸ್ಥೆಗಳು ಮಾರ್ಕೆಟಿಂಗ್‌ ಮಾಡಲು ಫೇಸ್‌ಬುಕ್‌ ಪೇಜನ್ನು ಬಳಸಿಕೊಳ್ಳುತ್ತಿವೆ. 

ಸೇಲ್‌ ಪ್ರಾಡಕ್ಟ್
ಫೇಸ್‌ಬುಕ್‌ ಮೂಲಕ ವ್ಯಕ್ತಿ, ಅಥವಾ ಕಂಪೆನಿ ತನ್ನ ಪ್ರತಿಭೆ, ಉತ್ಪನ್ನವನ್ನು ಮಾರಾಟ ಮಾಡಿ ಹಣ ಗಳಿಸಲು ಅವಕಾಶವಿದೆ. ಕೆಲವೊಮ್ಮೆ ಫೇಸ್‌ಬುಕ್‌ ಆಫ‌ರ್‌ಗಳನ್ನು ನೀಡುತ್ತದೆ. ಉತ್ಪನ್ನ, ಉತ್ತಮ ಆಲೋಚನೆ (ಐಡಿಯಾ) ಮಾಹಿತಿಯನ್ನು ಆಫ‌ರ್‌ ಲಿಂಕ್‌ ಬಾಕ್ಸಿನಲ್ಲಿ ತಿಳಿಸಿದರೆ, ಕೂಪನ್‌ ಕೋಟ್‌ ಲಭ್ಯವಾಗುತ್ತದೆ. ಅದನ್ನು ಬಳಸಿಕೊಂಡು ರಿಯಾಯಿತಿಯ ಮೂಲಕ ಉತ್ಪನ್ನವನ್ನು ಫೇಸ್‌ಬುಕ್‌ ಬಳಕೆದಾರರಿಗೆ ಸೇಲ್‌ ಮಾಡಬಹುದು. ಅಲ್ಲದೆ, ಅತ್ಯುತ್ತಮ ಐಡಿಯಾಗಳನ್ನು ಕಂಪನಿಗಳು ಬಳಸಿಕೊಂಡು ಅವನ್ನು ತಿಳಿಸಿದ ವ್ಯಕ್ತಿಗೆ ಇಂತಿಷ್ಟು ಹಣವನ್ನು ಪಾವತಿ ಮಾಡುತ್ತವೆ. 

ಫ್ರೀಲಾನ್ಸ್‌ ಮಾರ್ಕೆಟಿಂಗ್‌
ಎಫ್ಬಿಯಲ್ಲಿ ಫ್ರೀಲಾನ್ಸ್‌ ಮಾರ್ಕೆಟರ್‌ಗಳಿಗೆ ಬೇಡಿಕೆ ಹೆಚ್ಚು. ಅವರು ಡಾಲರ್‌ ಲೆಕ್ಕದಲ್ಲಿ ಗಳಿಸುವವರೂ ಹೌದು. ಆದರಿಲ್ಲಿ ಆನ್‌ಲೈನ್‌ ಮಾರುಕಟ್ಟೆಯ ಕೌಶಲ್ಯ ಲೆಕ್ಕಕ್ಕೆ ಬರುತ್ತದೆ. ಫ್ರೀಲಾನ್ಸ್‌ ಮಾರ್ಕೆಟರ್‌ ಎಂದರೆ ಯಾರು ಗೊತ್ತಾ? ಫೇಸ್‌ಬುಕ್‌ ಬಳಕೆದಾರರ ನಾಡಿ ಮಿಡಿತವನ್ನು ತಿಳಿಯುತ್ತಾ, ಸ್ಟೇಟಸ್‌ಗಳು, ಬಳಸುವ ವಸ್ತು, ವಿಷಯ, ಹೆಚ್ಚು ಚರ್ಚಿಗೆ ಗ್ರಾಸವಾದ ವ್ಯಕ್ತಿ, ವಿಚಾರ, ವಾರದ ಟಾಪ್‌ ಚರ್ಚೆಗಳು, ಲೈಕ್‌ ಮಾಡಿದ ಚಿತ್ರ, ದೃಶ್ಯ, ದೇಶ, ಕಾಲ, ವರ್ತಮಾನ, ಋತು, ವಾತಾವರಣ ಎಲ್ಲದರ ಬಗ್ಗೆ ಜ್ಞಾನವನ್ನು ಹೊಂದಿ, ಅದರ ವಿಮರ್ಶೆ ಮಾಡಿ ಪೋಸ್ಟ್‌ಗಳನ್ನು ಹಾಕುವವರು. ಇದೇ ಅವರ ಪಾಲಿನ ಪೂರ್ಣಾವಧಿ ಕೆಲಸ. ಅವರ ಪೋಸ್ಟ್‌ಗಳು ದೊಡ್ಡ ಸಂಖ್ಯೆಯ ಪೋಸ್‌ಬುಕ್ಕಿಗರನ್ನು ತಲುಪುತ್ತದೆ. ಈ ಮಾದರಿಯಲ್ಲಿ ಯೋಜನೆಗಳನ್ನು ಬಳಸಿ ಕಂಟೆಂಟ್‌ ತಯಾರಿಸಿ ಮಾರಾಟ ಮಾಡಿ ಹಣ ಗಳಿಸಿಕೊಳ್ಳುತ್ತಾರೆ. 

Advertisement

ಫೇಸ್‌ಬುಕ್‌ ಆ್ಯಪ್‌
ಫೇಸ್‌ಬುಕ್ಕಿನಲ್ಲಿ ಆ್ಯಪ್‌ ತಯಾರು ಮಾಡುವ ಅವಕಾಶವನ್ನು ಬಳಕೆದಾರರಿಗೂ ನೀಡಲಾಗಿದೆ. ಅಲ್ಲಿ ಕೆಲವು ಟೂಲ್‌ ಬಳಸಿ ಕೌಶಲ್ಯ ಪೂರ್ಣವಾದ ಆ್ಯಫ್ ತಯಾರಿಸಿ ತಮ್ಮದೇ ಬ್ಯಾನರ್‌ನಲ್ಲಿ ಜಾಹೀರಾತು ನೀಡಿದರೆ, ಕಂಪನಿಗಳು ಆ ಆ್ಯಪ್‌ಗ್ಳನ್ನು ಖರೀದಿಸಿದರೆ, ಆಗ ಆ್ಯಪ್‌ ತಯಾರಿಸಿದ ಬಳಕೆದಾರರು ಹಣ ಗಳಿಸಬಹುದು.

ಅಕೌಂಟ್‌ ಸೇಲಿಂಗ್‌
ಹಲವು ಎಫ್ಬಿ ಅಕೌಂಟ್‌ ಹೊಂದಿರುವವರು, ತಮ್ಮ ಹಳೆಯ ಅಕೌಂಟನ್ನು ಮಾರಾಟ ಮಾಡಿಯೂ ದುಡ್ಡು ಸಂಪಾದಿಸಬಹುದು. ಆದರೆ, ಆ ಅಕೌಂಟ್‌ನಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ, ಹೆಚ್ಚು ಸ್ನೇಹಿತರನ್ನು ಹೊಂದಿರಬೇಕು. ಈ ಅಕೌಂಟ್‌ಗಳನ್ನು ಕೊಂಡವರು ಉತ್ಪನ್ನ ಮಾರಾಟ ಪ್ರಚೋದನಾ ತಂತ್ರಗಳಿಗೆ ಬಳಕೆ ಮಾಡುವುದುಂಟು.

ಗ್ರೂಪ್‌ ಸೆಲ್ಲಿಂಗ್‌
ಅನೇಕ ಜಾಲತಾಣಗಳೊಂದಿಗೆ, ಬ್ಲಾಗ್‌ನೊಂದಿಗೆ ಇಂಟರ್‌ಲಿಂಕ್‌ ಹೊಂದಿರುವ ಉತ್ತಮ ಗ್ರೂಪ್‌ 10 ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದರೆ, ಮಾರ್ಕೆಟಿಂಗ್‌, ಪೇಯ್ಡ ಸರ್ವೆ, ಕಂಟೆಂಟ್‌ ಸ್ಪಾನ್ಸರ್‌, ಪ್ರಾಡೆಕ್ಡ್ ಸೇಲ್‌ಗಾಗಿ ಕಂಪನಿಗಳು ಹಣ ನೀಡುತ್ತವೆ. ಅದನ್ನು ಬಳಸಿಕೊಳ್ಳಬಹುದು. 

ಇ- ಕಾಮರ್ಸ್‌ನಲ್ಲಿ ಮಾರ್ಕೆಟಿಂಗ್‌ ಮಾಡಲು ಸಾಮಾಜಿಕ ಜಾಲತಾಣಗಳ ಸಹಭಾಗಿತ್ವ ಅಪರಿಮಿತ. ಅದರಲ್ಲೂ ಫೇಸ್‌ಬುಕ್‌ ವಿಶಾಲ ವೇದಿಕೆಯಾಗಿ ಪರಿಣಮಿಸಿದೆ. ಪ್ರಪಂಚದ ಎಲ್ಲಾ ಕಂಪನಿಗಳು ಫೇಸ್‌ಬುಕ್ಕನ್ನು ತನ್ನ ಪ್ರಾಡಕ್ಟ್ ಗಳನ್ನು ಪ್ರಮೋಟ್‌ ಮಾಡಲು ಬಳಸಿಕೊಳ್ಳುತ್ತಿವೆ. ಇದಕ್ಕಾಗಿಯೇ ಸೋಶಿಯಲ್‌ ಮೀಡಿಯಾ ಪ್ರಮೋಟರ್‌ಗಳೆಂಬ ಹೊಸ ವೃತ್ತಿಯೇ ಸೃಷ್ಟಿಯಾಗಿದೆ.

– ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next